ಮಡಿಕೇರಿ: ಕೊಡವ ಮಂದಿ ಬುಡಕಟ್ಟು ಜನಾಂಗಕ್ಕೆ ಸೇರಿದವರೆಂದು ಸಾಬೀತುಪಡಿಸಲು ಅಗತ್ಯವಾದ ಕ್ಷೇತ್ರ ಸಮೀಕ್ಷೆÉಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಭಾಷಾವಾರು ಅಲ್ಪಸಂಖ್ಯಾತರೆನ್ನುವ ಹಾಗೂ ಸಾಮಾಜಿಕ, ಆರ್ಥಿಕ ಆಧಾರದ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗುವದೆಂದು ತಿಳಿದುಬಂದಿದೆ.

ರಾಜಕೀಯ ವಿರೋಧ ಹಾಗೂ ಆಡಳಿತಾತ್ಮಕ ಅಡೆ ತಡೆಗಳ ನಡುವೆಯೇ ಸರಕಾರ ಈ ಕಾರ್ಯಕ್ಕೆ ಚಾಲನೆ ನೀಡಿದೆ.

ಕೊಡವ ನ್ಯಾಷನಲ್ ಕೌನ್ಸಿಲ್ (ಸಿ.ಎನ್.ಸಿ)ನ ಪ್ರಯತ್ನದಿಂದ 2011ರಲ್ಲಿ ಕೇಂದ್ರದಲ್ಲಿ ಯು.ಪಿ.ಎ. ಸರಕಾರವಿದ್ದಾಗಲೇ ಸಮೀಕ್ಷೆÀ್ಷಗೆ ನಿರ್ಧಾರ ತಳೆದಿದ್ದರೂ ರಾಜಕೀಯ ಕಾರಣಗಳಿಗಾಗಿ ಆ ಕಾರ್ಯ ಪ್ರಾರಂಭಗೊಂಡಿರಲಿಲ್ಲ.

2016ರಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದಿಂದ ಕೊಡಗು ಜಿಲ್ಲೆಯಲ್ಲಿ ಸಮೀಕ್ಷಾ ಕಾರ್ಯ ಪ್ರಾರಂಭ ಗೊಂಡರೂ ಮಠವೊಂದರÀ ಪ್ರಭಾವ ಹಾಗೂ ಕೊಡಗಿನ ಕೆಲವು ಆಡಳಿತ ಪಕ್ಷದ ನಾಯಕರ ಒತ್ತಡದಿಂದ ಸಮೀಕ್ಷಾ ಕಾರ್ಯ ಅರ್ಧದಲ್ಲಿಯೇ ಸ್ಥಗಿತಗೊಂಡಿತ್ತು. ಮುಖ್ಯವಾಗಿ ಸಿ.ಎನ್.ಸಿ. ಸಂಸ್ಥೆ ಇದರ ಸಾಧನೆಯ ಹೆಸರು ಪಡೆಯುವದು ಕೆಲವರಿಗೆ ಇಷ್ಟವಿರಲಿಲ್ಲ.

ಪ್ರಸಕ್ತ ಕೇಂದ್ರದ ಎನ್.ಡಿ.ಎ. ಸರಕಾರವು ಕೊಡವರು ಬುಡಕಟ್ಟು ವರ್ಗಕ್ಕೆ ಸೇರ್ಪಡೆಗೊಳ್ಳಲು ಅಗತ್ಯವಾದ ಆಧಾರಗಳಿವೆಯೇ ಎಂಬದನ್ನು ಕಂಡುಹಿಡಿಯಲು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ (ಕೆ.ಎಸ್.ಟಿ.ಆರ್.ಐ)ಗೆ ಸಮೀಕ್ಷೆ ನಡೆಸಲು ಒಪ್ಪಿಸಿದುದಾಗಿ ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಈ ನಡುವೆ ಸಿ.ಎನ್.ಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಮಡಿಕೇರಿಗೆ ಆಗಮಿಸಿದ್ದ ಬಿಜೆಪಿ ಸಂಸದ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ತಾನು ರಾಜ್ಯಸಭೆಯಲ್ಲಿ ಕೊಡಗು ಜಿಲ್ಲೆಗೆ ಸ್ವಾಯತ್ತ ಮಾನ್ಯತೆ ದೊರಕಿಸುವ ಕುರಿತು ಒತ್ತಾಯಿಸು ವದಾಗಿ ಆಶ್ವಾಸನೆಯಿತ್ತಿದ್ದರು. ಅದರಂತೆ ಅವರು ಇತ್ತೀಚೆಗೆ ಈ ಕುರಿತು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ದ್ದರೂ ಈ ವಿಷಯವು ಇನ್ನೂ ಚರ್ಚೆಗೆ ಬಾಕಿಯಿದೆ. ಕಾಂಗ್ರೆಸ್‍ನ ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಅವರು ಕೂಡ ಸಿ.ಎನ್.ಸಿ.ಯ ಹೋರಾಟದ ಕುರಿತು ಈ ಹಿಂದೆÀ ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಕೂಡ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಕಾರ್ಯದರ್ಶಿಯ ವರನ್ನು ಭೇಟಿಯಾಗಿ ಕೊಡವ ಜನಾಂಗಕ್ಕೆ ಬುಡಕಟ್ಟು ಮಾನ್ಯತೆ ಕುರಿತು ಚರ್ಚಿಸಿದ್ದರು.

ಸಂಘಟನೆಯ ನಿರಂತರ ಪ್ರಯತ್ನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಉತ್ತಮ ಸ್ಪಂದನ ದೊರೆತುದಕ್ಕೆ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಸ್ವಾಗತ ವ್ಯಕ್ತಪಡಿಸಿದ್ದಾರೆ.