*ಗೋಣಿಕೊಪ್ಪಲು, ಡಿ. 31 : ಮಳೆಗಾಲದಲ್ಲಿ ಲಕ್ಷ್ಮಣ ತೀರ್ಥ ನದಿಯ ಹರಿವು ಹೆಚ್ಚಳದಿಂದ ಸೇತುವೆಯ ಮೇಲೆ ನೀರು ನಿಂತು ಜಲವೃತ್ತಗೊಳ್ಳುತ್ತಿದ್ದ ಹರಿಹರ ಬಲ್ಯಮಂಡೂರು ರಸ್ತೆ ಸಂಪರ್ಕದ ಲಕ್ಷ್ಮಣತೀರ್ಥ ಸೇತುವೆ ಎತ್ತರಿಸುವ ಕಾಮಗಾರಿಗೆ ಚಾಲನೆ ದೊರಕುವ ಮೂಲಕ ಮಳೆಗಾಲದಲ್ಲಿ ಉಂಟಾಗುತ್ತಿದ್ದ ಸಂಕಷ್ಟ ಆತಂಕದಿಂದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು 3 ಕೋಟಿ 86 ಲಕ್ಷದ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ ಸೋಮವಾರ ಶಾಸಕ ಕೆ.ಜಿ.ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸೇತುವೆಯನ್ನು ನಾಲ್ಕು ಅಡಿ ಎತ್ತರಿಸಲಾಗುವದು. ಮತ್ತು 40.88 ಮೀ. ಉದ್ದ 12 ಮೀ. ಅಗಲ,ಹಾಗೂ 10.50 ಮೀ. ರಸ್ತೆಯ ಅಗಲ 1.50 ಮೀ. ಪಾದಚಾರಿ ಮಾರ್ಗದ ಅಗಲ 210 ಮೀ. ಕೂಡುರಸ್ತೆ ಉದ್ದದಲ್ಲಿ ಕಾಮಗಾರಿ ನಡೆಯಲಿದೆ. ಕಾಸರಗೋಡಿನ ಮೆ. ಎಲ್. ಓ. ಎಫ್ ಕನ್ಷ್ಟ್ರಕ್ಸನ್ ವತಿಯಿಂದ ಸೇತುವೆ ನಿರ್ಮಾಣ, ಸಂಸ್ಥೆಯ ಇಂಜಿನಿಯರ್ ಮಚ್ಚಾರಂಡ ಚಂಗಪ್ಪ ನೇತೃತ್ವದಲ್ಲಿ ಸೇತುವೆ ಮೇಲು ಉಸ್ತುವಾರಿ ನಡೆಯಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಅತೀ ಶೀಘ್ರವಾಗಿ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಮಳೆಗಾಲದಲ್ಲಿ ಸೇತುವೆಯ ಮೇಲೆ ನೀರು ನಿಂತು ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು ಈ ಭಾಗದ ಗ್ರಾಮಸ್ಥರು ಪ್ರತಿವರ್ಷ ಮಳೆಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದರು ಸೇತುವೆ ತಗ್ಗು ಇದ್ದ ಕಾರಣ ಸೇತುವೆಯ ಮೇಲೆ ನೀರು ನಿಲ್ಲಲು ಕಾರಣವಾಗುತ್ತಿದೆ ಈಗಾಗಿ ಸೇತುವೆಯನ್ನು ಎತ್ತರಿಸಲು ಕ್ರಮ ಕೈಗೊಂಡು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭ ಬಲ್ಯಮಂಡೂರು ಗ್ರಾ.ಪಂ. ಅಧ್ಯಕ್ಷ ಖುಷಿಕುಮಾರ್ ಬಿ.ಜೆ,ಪಿ. ಸ್ಥಾನಿಯ ಸಮಿತಿ ಅಧ್ಯಕ್ಷ ಚಿಂಡಮಾಡ ಮಂದಣ್ಣ, ವಿ.ಎಸ್.ಎಸ್. ಎನ್. ಅಧ್ಯಕ್ಷ ದಾಯಂಡ ಅಯ್ಯಣ್ಣ, ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಕಟ್ಟೆಂಗಡ ಪ್ರಕಾಶ್, ಮಾಚಿಮಡ ಅಚ್ಚಪ್ಪ, ಹಾಗೂ ಪ್ರಮುಖರಾದ ದೇಯಂಡ ಅಣ್ಣಯ್ಯ, ಕೆ.ಪಿ.ಪ್ರದೀಪ್,ಇಂಜಿನೀಯರ್ ಧರ್ಮಗೌಡ, ಪದ್ಮನಾಭ ಹಾಗೂ ಎಲ್.ಓ.ಎಫ್. ಕನ್ಷ್ಟ್ರಕ್ಷನ್ ಇಂಜಿನಿಯರ್ ಮಚ್ಚ್ಚಾರಂಡ ಚಂಗಪ್ಪ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
-ಚಿತ್ರ, ವರದಿ :ಎನ್.ಎನ್.ದಿನೇಶ್