ಮಡಿಕೇರಿ, ಡಿ. 31 : ರಾಜ್ಯದಲ್ಲಿ ವಿವಿಧ ಕಾರಣಗಳಿಂದ ಖಾಲಿಯಾದ 3 ತಾಲೂಕು ಪಂಚಾಯಿತಿಯ 3 ತಾ.ಪಂ.ಕ್ಷೇತ್ರಗಳಿಗೆ ಹಾಗೂ 29 ಜಿಲ್ಲೆಗಳ 240 ಗ್ರಾ.ಪಂ.ಗಳ 330 ಸ್ಥಾನಗಳಿಗೆ ಉಪ ಚುನಾವಣೆ ಮತ್ತು ಅವಧಿ ಮೀರಿ ಮುಕ್ತಾಯಗೊಂಡ 4 ತಾಲೂಕುಗಳ 8 ಗ್ರಾಮ ಪಂಚಾಯಿತಿಗಳಿಗೆ ತಾ. 2 ರಂದು ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವಂತಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಆಯಾಯ ಮತ ಕ್ಷೇತ್ರಗಳ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳಿಗೆ, ಶಾಲಾ ಕಾಲೇಜುಗಳಿಗೆ, (ಅನುದಾನಿತ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ತಾ. 2 ರಂದು ಸಾರ್ವತ್ರಿಕ ರಜೆ ಘೋಷಿಸಿದೆ.