ಮಡಿಕೇರಿ, ಡಿ. 31: ಮನೆ ಮಂದಿ ವಿವಾಹ ಸಮಾರಂಭಕ್ಕೆ ತೆರಳಿದ್ದ ಸಂದರ್ಭ ಮನೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಅಪಹರಿಸಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಟಕೇರಿಯಲ್ಲಿ ನಡೆದಿದೆ.

ಅಲ್ಲಿನ ನಿವಾಸಿ ಗುತ್ತಿಗೆದಾರರಾಗಿರುವ ಬಿ.ಎಸ್. ಆನಂದ ಅವರ ಪುತ್ರಿಯ ವಿವಾಹ ಮಡಿಕೇರಿಯಲ್ಲಿ ನಡೆದಿದ್ದು, ರಾತ್ರಿ ಚಪ್ಪರ ಮುಗಿಸಿ ಮನೆಗೆ ಹಿಂತಿರುಗಿದ ಸಂದರ್ಭ ಮನೆಯ ಬಾಗಿಲು ಮುರಿದು ಕಳ್ಳರು ಒಳಪ್ರವೇಶಿಸಿರುವದು ತಿಳಿದು ಬಂದಿದೆ. ಮನೆಯಲ್ಲಿ ಆನಂದ ಅವರ ಸಹೋದರನ ಪತ್ನಿ ಜಾನಕಿ ಅವರು ತಮ್ಮ ಪರ್ಸ್‍ನಲ್ಲಿ ಇಟ್ಟಿದ್ದ ರೂ. 90 ಸಾವಿರ ನಗದು ಹಾಗೂ ಚಿನ್ನಾಭರಣ ಕಳವಾಗಿರುವ ಕುರಿತು ಗ್ರಾಮಾಂತರ ಪೊಲೀಸರಿಗೆ ಪುಕಾರಾಗಿದೆ.