ಮಡಿಕೇರಿ, ಡಿ. 30: ಅಸ್ಸಾಂ ರಾಜ್ಯದ ಗುವಾಹಟಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವನವಾಸಿ ಕ್ರೀಡಾಕೂಟದಲ್ಲಿ ಇಂದು ನಡೆದ ಜೂನಿಯರ್ ವಿಭಾಗದ 400 ಮೀ. ಓಟದಲ್ಲಿ ಜಿಲ್ಲೆಯ ಕ್ರೀಡಾಪಟು ಅಭಿಲಾಷ್ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿದ್ದಾನೆ.
ಈತ ತಿತಿಮತಿಯ ಮರೂರುವಿನ ಮಜ್ಜಿಗೆಹಳ್ಳ ಹಾಡಿ ನಿವಾಸಿ, ಮಂಜು ಅವರ ಪುತ್ರನಾಗಿದ್ದು, ಹುಣಸೂರು ಸರಕಾರಿ ಸೀನಿಯರ್ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಾನೆ. ವನವಾಸಿ ಕಲ್ಯಾಣ ಸಂಸ್ಥೆಯ ಕಾರ್ಯಕರ್ತೆ ಹಾಗೂ ಕೊಡಗು ಜಿಲ್ಲಾ ಸಂಯೋಜಕಿಯಾಗಿರುವ, ಉತ್ತರ ಕನ್ನಡ ಜಿಲ್ಲೆಯ ಪ್ರಸ್ತುತ ತಿತಿಮತಿಯಲ್ಲಿ ನೆಲೆಸಿರುವ ಮಂಗಳಾ ಸಿಧು ಅವರ ಮಾರ್ಗದರ್ಶನದಲ್ಲಿ ನಾಲ್ವರು ಕ್ರೀಡಾಪಟುಗಳು ತೆರಳಿದ್ದರು.