ವೀರಾಜಪೇಟೆ, ಡಿ. 30 : ವೀರಾಜಪೇಟೆಯ ಪಂಜರ್‍ಪೇಟೆ ಯೂಸೂಫ್ ಎಂಬವರಿಗೆ ಸೇರಿದ ಮನೆಯಿಂದ ಬೆಲೆ ಬಾಳುವ ಟಿ.ವಿ.ಯನ್ನು ಕಳವು ಮಾಡಿದ ಆರೋಪದ ಮೇರೆ ನಗರ ಪೊಲೀಸರು ಮುಗೇಶ್, ಬಾಬು ಹಾಗೂ ಸಜನ್ ಎಂಬ ಮೂವರನ್ನು ಬಂಧಿಸಿ ಇಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಮೇರೆ ಮೂವರನ್ನು 15ದಿನಗಳ ತನಕ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಮನೆಯಿಂದ ಟಿ.ವಿ ಕಳವು ಆದ ಕುರಿತು ಯೂಸೂಫ್ ಸಂಶಯದ ಮೇರೆ ಈ ಮೂವರ ವಿರುದ್ಧ ದೂರು ನೀಡಿ ತನಿಖೆಗೊಳಪಡಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ಪೊಲೀಸರು ಬಂಧಿತರಿಂದ ಟಿ.ವಿಯನ್ನು ವಶ ಪಡಿಸಿಕೊಂಡಿದ್ದಾರೆ.