ಮಡಿಕೇರಿ, ಡಿ. 30: ನಿನ್ನೆ ಸುಂಟಿಕೊಪ್ಪದ ಬಳಿ ಶಾಂತಗಿರಿ ತೋಟದ ಹತ್ತಿರದ ರಸ್ತೆ ತಿರುವಿನಲ್ಲಿ ಶಾಲಾ ಮಕ್ಕಳ ಪ್ರವಾಸಿ ಬಸ್ ಅವಘಡ ಸಂಬಂಧ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ರಾಮನಗರದ ನಿವಾಸಿ, ಲಿಂಗರಾಜ್ ಎಂಬವರಿಗೆ ಸೇರಿದ್ದೆನ್ನಲಾದ ಬಸ್‍ನ ದಾಖಲೆಗಳನ್ನು ಪರಿಶೀಲಿಸಿ, ಆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಬಸ್ ಚಾಲಕ ಜಾನ್ಸನ್ ಆಸ್ಪತ್ರೆಗೆ ದಾಖಲಾಗಿರುವ ಮೇರೆಗೆ ಇನ್ನಷ್ಟೇ ಪೊಲೀಸರಿಗೂ ಹೆಚ್ಚಿನ ಮಾಹಿತಿ ಲಭಿಸಬೇಕಿದೆ. ಮೃತ ವಿದ್ಯಾರ್ಥಿ ಬಸವರಾಜ್ ಅಂತ್ಯಸಂಸ್ಕಾರ ನಿನ್ನೆ ರಾತ್ರಿ ಬಳ್ಳಾರಿಯ ಗಣಿಕೆಹಾಳು ಗ್ರಾಮದಲ್ಲಿ ಜರುಗಿದ್ದಾಗಿ ಗೊತ್ತಾಗಿದೆ.