ಮಡಿಕೇರಿ, ಡಿ.30: ಜಿಲ್ಲಾ ಹಿರಿಯ ನಾಗರಿಕರ ವೇದಿಕೆ ವತಿಯಿಂದ ಸಂಗ್ರಹಿಸಲಾದ ರೂ.90 ಸಾವಿರಗಳೊಂದಿಗೆ ಪ್ರಕೃತ್ತಿ ವಿಕೋಪದಲ್ಲಿ ಸಂತ್ರಸ್ತರಾದ ಹಿರಿಯರಿಗೆ ನೆರವು ನೀಡಲಾಯಿತು.

ಬಾಲಭವನದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ವೇದಿಕೆ ಮೂಲಕ ಮೈಸೂರಿನ ಯೋಗಸೇವಾ ಸಂಸ್ಥೆಯು ಕಂಬಳಿ, ಸ್ವೆಟರ್, ಹೊದಿಕೆಯನ್ನು 30 ಮಂದಿ ಸಂತ್ರಸ್ತರಿಗೆ ನೀಡಿತು. 30 ಹಿರಿಯರಿಗೆ ತಲಾ ರೂ.3 ಸಾವಿರಗಳಂತೆ ನೆರವನ್ನು ಈ ಸಂದರ್ಭ ನೀಡಲಾಯಿತು.

ಮೈಸೂರಿನ ಯೋಗ ಸೇವಾ ಸಂಸ್ಥೆಯ ಪ್ರಮುಖ ನರಸಿಂಹನ್ ಮತ್ತು ಪೆರಿಯ ಕರಿಯಪ್ಪನ್, ಕೊಡಗಿನಲ್ಲಿ ನಿಸರ್ಗ ವಿಕೋಪ ಸಂಭವಿಸಬಾರದಿತ್ತು. ಇಂತಹÀ ದುರಂತದ ಪರಿಣಾಮಗಳನ್ನು ಎದುರಿಸಿರುವ ಹಿರಿಯ ನಾಗರಿಕರ ಮನೋಸ್ಥೆರ್ಯ ದೊಡ್ಡದು. ಮನೆ, ಆಸ್ತಿ ಕಳೆದುಕೊಂಡು ನೋವುಂಡವರಿಗೆ ಯಾವದೇ ನೆರವು ಕೂಡ ಅತ್ಯಲ್ಪ. ಹೀಗಿದ್ದರೂ ಸಂತ್ರಸ್ತರಿಗೆ ಕೈಲಾದ ನೆರವು ನೀಡುವ ನಿಟ್ಟಿನಲ್ಲಿ ಇಲ್ಲಿನ ವೇದಿಕೆ ಮೂಲಕ ತಮ್ಮ ಸಂಸ್ಥೆ ನೆರವು ನೀಡುತ್ತಿದೆ ಎಂದರು.

ಸಾಹಿತಿ ನಾಗೇಶ್ ಕಾಲೂರು ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಅನುಭವಿಸುತ್ತಿರುವ ನೋವು, ಸಮಸ್ಯೆಗಳನ್ನು ಸಭಿಕರಿಗೆ ಅನಾವರಣಗೊಳಿಸಿದರು. ಇನ್ನು ಕೂಡ ತಮಗೆ ಸರ್ಕಾರದಿಂದ ನೆರವು ಲಭಿಸಿಲ್ಲ ಎಂದು ಅಳಲು ತೋಡಿಕೊಂಡರು.

ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕೊಂಗಂಡ ತಿಮ್ಮಯ್ಯ, ಸ್ಥಾಪಕಾಧ್ಯಕ್ಷ ಕೋದಂಡ ಎಂ. ಮಾದಪ್ಪ, ಮೈಸೂರಿ ಕರ್ನಲ್ ವೈ.ಎಸ್.ಅಯ್ಯಪ್ಪ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ್ ಅಣ್ಣಪ್ಪ, ಖಜಾಂಜಿ ಎನ್.ಎಂ.ಸುಮತಿ, ಉಪಾಧ್ಯಕ್ಷೆ ದಂಬೆಕೋಡಿ ಸಿ.ಲೀಲಾವತಿ ಸೇರಿದಂತೆ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ಮೈಸೂರಿನ ಅನಿತಾ ಪ್ರಾರ್ಥಿಸಿದರು.