ಸೋಮವಾರಪೇಟೆ, ಡಿ. 30: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರು ಯೋಜನೆಯ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವ ಸಾರಾಂಶವನ್ನು ಹೊಂದಿರುವ ಕಿರುಚಿತ್ರವನ್ನು ಸಂಘದ ಸದಸ್ಯರಿಗೆ ಪ್ರದರ್ಶಿಸಲಾಯಿತು.

ಇಲ್ಲಿನ ತಾಲೂಕು ಯೋಜನಾ ಕಚೇರಿಯಲ್ಲಿ ಸಮೃದ್ಧಿ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಗೆ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಸಿಆರ್‍ಪಿ ಸತೀಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸ್ವಸಹಾಯ ಸಂಘಗಳಿಂದ ಮಹಿಳೆಯರು ಸಂಘಟಿತರಾಗುತ್ತಿದ್ದು, ಸಾಮಾಜಿಕ, ಆರ್ಥಿಕವಾಗಿಯೂ ಸದೃಢರಾಗುತ್ತಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನಾಧಿಕಾರಿ ವೈ. ಪ್ರಕಾಶ್, ಶ್ರೀ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ನೆನಪಿಗಾಗಿ, ಸ್ವಸಹಾಯ ಸಂಘಗಳ ಸದಸ್ಯರ ಅಭಿವೃದ್ಧಿಯನ್ನು ತೋರಿಸುವ ನಿಟ್ಟಿನಲ್ಲಿ ಕಾನೂರಾಯಣ ಎಂಬ ಕಿರುಚಿತ್ರವನ್ನು ತಯಾರಿಸಲಾಗಿದೆ ಎಂದರು.

ಈ ಸಂದರ್ಭ ಪ.ಪಂ. ಸದಸ್ಯೆ ನಳಿನಿ ಗಣೇಶ್, ಮಾಜೀ ಅಧ್ಯಕ್ಷೆ ಲೀಲಾ ನಿರ್ವಾಣಿ, ಪ್ರಮುಖರಾದ ದಾಕ್ಷಾಯಿಣಿ, ಯೋಜನೆಯ ಮೇಲ್ವಿಚಾರಕ ರಮೇಶ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಪದ್ಮಾ, ಸೇವಾ ಪ್ರತಿನಿಧಿ ತಾರಾಲಕ್ಷ್ಮೀ, ಶೈಲಾ ಎಸ್.ಎಸ್., ಎಸ್.ಬಿ. ಶೈಲಾ ಸೇರಿದಂತೆ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.