ಸೋಮವಾರಪೇಟೆ, ಡಿ. 30: ದೇಶದಲ್ಲಿ ಶಾಂತಿ, ಕೋಮು ಸೌಹಾರ್ದತೆ ನೆಲೆಸಲೆಂದು ಪ್ರಾರ್ಥಿಸುವ ಸಲುವಾಗಿ ಇಲ್ಲಿನ ಇಂದಿರಾ ಗಾಂಧಿ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಪಟ್ಟಣದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ತೆರಳಿದರು.
ಇಲ್ಲಿನ ಆಂಜನೇಯ ದೇವಾಲಯದಿಂದ ಶಾಂತಳ್ಳಿ, ಕುಂದಳ್ಳಿ, ಮಾಗೇರಿ, ಬಿಸ್ಲೆ, ಸುಬ್ರಹ್ಮಣ್ಯ, ಮಾರ್ದಳ, ಕೊಕ್ಕಡ ಮಾರ್ಗವಾಗಿ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ತಿಳಿಸಿದರು.
ಸಂಘದ ಪದಾಧಿಕಾರಿಗಳಾದ ಹೆಚ್.ಎ. ಸತ್ಯನಾರಾಯಣ, ಎಲ್. ರವಿ, ಪ್ರಸನ್ನ, ಪುನೀತ್, ಮನೋಜ್‍ಕುಮಾರ್, ಹೆಚ್.ಬಿ. ರಾಜು, ಅಜಯ್, ಹೆಚ್.ಜಿ. ಮುರುಳಿ, ಗಿರೀಶ್ ಅವರುಗಳೂ ಸಹ ಪಾದಯಾತ್ರೆಯಲ್ಲಿ ತೆರಳಿದ್ದು, ಮಂಜುಶ್ರೀ ಸ್ಟೂಡಿಯೋದ ಶೇಷಪ್ಪ, ಮಣಿಕಂಠ, ಹಸನಬ್ಬ ಅವರುಗಳು ಬೀಳ್ಕೊಟ್ಟರು.