ಸೋಮವಾರಪೇಟೆ,ಡಿ.30: ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘ, ಒಕ್ಕಲಿಗರ ಯುವವೇದಿಕೆ, ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ, ನಗರ ಗೌಡ ಸಂಘದ ಸಂಯುಕ್ತಾಶ್ರಯದಲ್ಲಿ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಗಾದ 50 ಮಂದಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು.

ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಿಫಾರಸ್ಸಿಗೆ ಒಳಗಾದ 64 ಮಂದಿ ರೋಗಿಗಳನ್ನು ಮೆಡಿಕಲ್ ಕಾಲೇಜಿನ ಬಸ್‍ನಲ್ಲಿ ಕರೆದೊಯ್ಯಲಾಗಿತ್ತು. 50 ಮಂದಿಗೆ ಶಸ್ತ್ರಚಿಕಿತ್ಸೆ ಮಾಡಿ, 14 ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಯಿತು.

ಸಂಪೂರ್ಣ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇತರ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಯ ಸೇವೆ ಉಚಿತವಾಗಿದ್ದು, ರೋಗಿಗಳು ಔಷಧಿಯನ್ನು ಖರೀದಿಸಿದರು. ಆಸ್ಪತ್ರೆಯಲ್ಲಿ ಮೂರು ಹೊತ್ತು ಊಟದೊಂದಿಗೆ, ಉತ್ತಮ ಆರೋಗ್ಯ ಸೇವೆ ಒದಗಿಸಿದ್ದರು ಎಂದು ಶಸ್ತ್ರಚಿಕಿತ್ಸಗೆ ಒಳಗಾದವರು ತಿಳಿಸಿದರು.