ಸೋಮವಾರಪೇಟೆ,ಡಿ.29: ವಿಶಿಷ್ಟ ಸಂಸ್ಕøತಿ, ಆಚಾರ ವಿಚಾರಗಳಿಂದ ಕೂಡಿರುವ ಕೊಡವ ಸಾಂಸ್ಕøತಿಕ ಸಿರಿವಂತಿಕೆಯನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವ ಪಾಲೇರಿ, ಬದಿಗೇರಿ ನಾಡ್, ಮುತ್ತ್‍ನಾಡ್, ಪೊರಮಲೆನಾಡ್, ಸೂರ್ಲಬ್ಬಿ ನಾಡ್, ಗಡಿನಾಡ್, ಮಡಿಕೇರಿ ನಾಡ್, ಮಕ್ಕ್‍ನಾಡ್‍ಗಳನ್ನು ಒಳಗೊಂಡಂತೆ ಕರೆಯಲ್ಪಡುವ ಏಳ್‍ನಾಡ್‍ನ ಕೊಡವರು ಒಂದೆಡೆ ಕಲೆಯಲು ಕಾರಣವಾದ ಕೊಡವ ಸಾಂಸ್ಕøತಿಕ ಸಂಗಮ ಕಾರ್ಯಕ್ರಮ ಮಾದಾಪುರದಲ್ಲಿ ಮೇಳೈಸಿತು.ಪ್ರಸಕ್ತ ವರ್ಷ ಸಂಭವಿಸಿದ ಪ್ರವಾಹಕ್ಕೆ ಬಹುವಾಗಿ ಬಾಧಿಸಲ್ಪಟ್ಟಿರುವ ಈ ಏಳ್‍ನಾಡ್ ವ್ಯಾಪ್ತಿಯ ಜನರಿಗೆ, ಸಾಂತ್ವಾನದ ನುಡಿಗಳೊಂದಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಾದಾಪುರದ ಕೊಡವ ಸಮಾಜದ ಆಶ್ರಯದಲ್ಲಿ, ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ’ ಕಾರ್ಯಕ್ರಮ, ಪ್ರವಾಹ ಸಂದರ್ಭದಲ್ಲಿ ಎದುರಿಸಿದ ಸಂಕಷ್ಟಗಳನ್ನು ಪುನರ್‍ಮನನ ಮಾಡಿಕೊಳ್ಳಲು ವೇದಿಕೆಯಾಯಿತು.
ಪ್ರವಾಹದ ನಡುವೆಯೂ ಕೊಡವ ಸಾಂಸ್ಕøತಿಕ ಸಿರಿವಂತಿಕೆಯನ್ನು ಜೀವಂತವಾಗಿರಿಸಿಕೊಂಡಿರುವ ಏಳ್‍ನಾಡಿನ ಮಂದಿ, ತಮ್ಮ ಪ್ರಾಚೀನ ಪರಿಕರಗಳೊಂದಿಗೆ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಕøತಿಯ ಆಚಾರ ವಿಚಾರಗಳನ್ನು ಪ್ರದರ್ಶಿಸಿದರು.
ಹಚ್ಚಹಸಿರಿನ ವನಸಿರಿಯೊಂದಿಗೆ ನಿತ್ಯಹರಿದ್ವರ್ಣದಂತೆ ಕಂಗೊಳಿಸುತ್ತಿದ್ದ ಏಳ್‍ನಾಡ್, ಪ್ರಕೃತಿಯ ಮುನಿಸಿನಿಂದ ಇದೀಗ ತನ್ನ ಚಿತ್ರಣವನ್ನೇ ಬದಲಿಸಿ ಕೊಂಡಿದ್ದು, ಹಲವಷ್ಟು ಮಂದಿಯ ಮನೆ, ತೋಟ, ಗದ್ದೆ, ಆಸ್ತಿಗಳು ಕೈಜಾರಿವೆ. ಈ ಎಲ್ಲಾ ನೋವುಗಳ ನಡುವೆಯೂ ಸಂಸ್ಕøತಿಯ ಕೊಂಡಿಯನ್ನು ಕಳಚಿಕೊಳ್ಳದೇ ಕಾಪಾಡಿಕೊಂಡು ಬಂದಿರುವದನ್ನು ಗಣ್ಯರು ಶ್ಲಾಘಿಸಿದರು.
ಮಾದಾಪುರದ ವಿಎಸ್‍ಎಸ್‍ಎನ್ ಸಭಾಂಗಣದಿಂದ ಹೊರಟ ಮೆರವಣಿಗೆ ಮಾದಾಪುರದ ಪಟ್ಟಣ, ಮುಖ್ಯರಸ್ತೆ ಮೂಲಕ ಸಾಗಿ ಕೊಡವ ಸಮಾಜದಲ್ಲಿ ಸಮಾಪನಗೊಂಡಿತು. ಏಳ್‍ನಾಡಿನ ತಕ್ಕಮುಖ್ಯಸ್ಥರ ನೇತೃತ್ವದಲ್ಲಿ ನಡೆದ ಮೆರವಣಿಗೆಗೆ, ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಲಾಯಿತು.
ಕೊಡವ ಸಮುದಾಯದವರು ಕುಪ್ಯಚಾಲೆ, ಕೋರ್‍ಚೌಕ, ಪೀಚೆಕತ್ತಿ, ಒಡಿಕತ್ತಿ ಸೇರಿದಂತೆ ಕೊಡವ ಸಾಂಪ್ರದಾಯಿಕ ಧಿರಿಸಿನೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೊಡವ ಸಮಾಜದಲ್ಲಿ ಆಯೋಜಿಸ ಲಾಗಿದ್ದ ಸಭಾ ಕಾರ್ಯಕ್ರಮದ ನಂತರ ಬೊಳಕಾಟ್, ಕೋಲಾಟ್, ಉಮ್ಮತ್ತಾಟ್, ವಾಲಗತ್ತಾಟ್ ಸೇರಿದಂತೆ ಇತರ ಕಲಾಪ್ರಾಕಾರಗಳು ಪ್ರದರ್ಶನಗೊಂಡವು.
ಸನ್ಮಾನ: ಕೊಡಗಿನಲ್ಲಿ ಉಂಟಾದ ಪ್ರವಾಹ ಸಂದರ್ಭ
(ಮೊದಲ ಪುಟದಿಂದ) ಹಲವಷ್ಟು ಮಂದಿ ಸ್ವಯಂಸೇವಕರಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿ ಕೊಂಡಿದ್ದು, ಅಂತಹವರನ್ನು ಗುರುತಿಸಿ ಸನ್ಮಾನಿಸುವ ಕಾರ್ಯವೂ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಮಾದಾಪುರ ಕೊಡವ ಸಮಾಜದಿಂದ ನಡೆಯಿತು.
ಸಂತ್ರಸ್ತರಿಗೆ ಆಶ್ರಯ ನೀಡಿದ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಸುದ್ದಿ ಮಾಡಲೆಂದು ತೆರಳಿ, ಪರಿಸ್ಥಿತಿಯ ಗಂಭೀರತೆ ಅರಿತು ಸ್ವಯಂ ಸೇವಕರಂತೆ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡ ಪತ್ರಕರ್ತರಾದ ಕಿಶೋರ್ ರೈ ಕತ್ತಲೆಕಾಡು, ವಿಜಯ್ ಹಾನಗಲ್, ನವೀನ್ ಡಿಸೋಜ, ಎನ್.ಪಿ. ಪ್ರಜ್ವಲ್, ಜೀವನ್ ಪಾಲೆಕಾಡ್, ಸ್ಟ್ಯಾನ್ಲಿ, ಆರ್.ಆರ್. ಮನೋಜ್, ವಿನಯ್, ನವೀನ್, ಸತೀಶ್, ಪಪ್ಪು ತಿಮ್ಮಯ್ಯ ಅವರುಗಳನ್ನು ಅಭಿನಂದಿಸಲಾಯಿತು.
ಇದರೊಂದಿಗೆ ಪ್ರವಾಹ ಸಂದರ್ಭ ಸ್ವಯಂಪ್ರೇರಣೆಯಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡ ನೂರಾರು ಮಂದಿ ಯುವಕರು, ಆಹಾರ, ವಸತಿ ಸೌಕರ್ಯ ಕಲ್ಪಿಸಿದ ಸಹೃದಯರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭ ಏಳ್‍ನಾಡ್ ವ್ಯಾಪ್ತಿಯ ಪ್ರಮುಖರು, ಹಿರಿಯ ಕಲಾವಿದರನ್ನು ಅಕಾಡೆಮಿ ವತಿಯಿಂದ ಅಭಿನಂದಿಸಲಾಯಿತು.
ಕರ್ನಾಟಕದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮನು ಮೇದಪ್ಪ, ಸೋಮವಾರಪೇಟೆ ಅಧ್ಯಕ್ಷ ಅಭಿಮನ್ಯುಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
‘ಕಾವೇರಿ ಮಾತೆ ಕೈಬಿಡೋದಿಲ್ಲ..,’
‘ಪೂರ್ವಿಕರು ನಾಡು ಕಟ್ಟಿ ನಮ್ಮ ಕೈಗಿತ್ತಿದ್ದಾರೆ. ಎಷ್ಟೇ ಕಷ್ಟಬಂದರೂ ಮಾತೆ ಕಾವೇರಿ, ಇಗ್ಗುತಪ್ಪ ಕೈಬಿಡೋದಿಲ್ಲ. ನಮ್ಮ ಮೂಲ ನೆಲೆಯನ್ನು ಬಿಟ್ಟು ಯಾರೂ ಹೊರ ಹೋಗುವದು ಬೇಡ. ಧೈರ್ಯದಿಂದ ಬದುಕು ಎದುರಿಸೋಣ’ ಎಂದು ಪ್ರಾಕೃತಿಕ ವಿಕೋಪ ಘಟಿಸಿದ ಪ್ರದೇಶ ವ್ಯಾಪ್ತಿಯ ಜನರಿಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕಿವಿಮಾತು ಹೇಳಿದರು. ‘ಏಳ್‍ನಾಡ್‍ರ ಸಾಂಸ್ಕøತಿಕ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿ ಸಂಭವಿಸಿದ ದುರಂತ ಮಾನವ ನಿರ್ಮಿತ ಎಂಬ ತಜ್ಞರ ವರದಿಯಲ್ಲಿ ಹುರುಳಿಲ್ಲ ಎಂದ ವೀಣಾ ಅಚ್ಚಯ್ಯ ಅವರು, ಕೊಡಗನ್ನು ಪುನರ್ ನಿರ್ಮಾಣ ಮಾಡಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಪ್ರಾಧಿಕಾರ ರಚನೆಯೂ ಆಗಿದೆ. ಆದಷ್ಟು ಶೀಘ್ರದಲ್ಲೇ ಪ್ರಾಧಿಕಾರದ ಸಭೆ ನಡೆಯಲಿದೆ. ಹಲವಷ್ಟು ಮಂದಿ ಮನೆ, ಗದ್ದೆ, ತೋಟ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ದುರಂತಕ್ಕೆ ಒಳಗಾದವರಿಗೆ ನೀಡುವ ಪರಿಹಾರ ಇನ್ನೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ವಿಶಿಷ್ಟವಾದ ಕೊಡವ ಆಚಾರ ವಿಚಾರವನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕು. ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯ, ವಿದೇಶಗಳಲ್ಲೂ ಕೊಡವ ಸಂಸ್ಕøತಿಯನ್ನು ಪರಿಚಯಿಸುವ ಕಾರ್ಯ ಅಕಾಡೆಮಿಯಿಂದ ಆಗಬೇಕು. ಕಡಿಮೆ ಸಂಖ್ಯೆಯಲ್ಲಿರುವ ಸಮುದಾಯಗಳು ಹೆಚ್ಚು ಸಂಘಟಿತಗೊಳ್ಳಬೇಕು ಎಂದು ಅಭಿಪ್ರಾಯಿಸಿದರು.
ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯಿಂದ ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆದಿರುವದು ಶ್ಲಾಘನೀಯ ಎಂದರು. ಕೊಡವ ಸಂಸ್ಕøತಿ ಆಚಾರ ವಿಚಾರಗಳನ್ನು ಏಳ್‍ನಾಡಿನ ಮಂದಿ ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಸಂಸ್ಕøತಿ ಉಳಿದರೆ ಮಾತ್ರ ಸಮಾಜ ಉಳಿಯುತ್ತದೆ. ಎಂತಹ ಕ್ಲಿಷ್ಟರಕ ಸನ್ನಿವೇಶ ಎದುರಾದರೂ ಹುಟ್ಟಿದ ಊರನ್ನು ಬಿಡಬಾರದು ಎಂದರು.
ಪ್ರವಾಹ ಪೀಡಿತ ಕೊಡಗಿನಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿ ದ್ದರೂ ಪೂರ್ತಿ ಪ್ರಮಾಣದಲ್ಲಿ ಪರಿಹಾರ ಆಗಿಲ್ಲ. ಈ ಬಗ್ಗೆ ತಾನೂ ಸೇರಿದಂತೆ ಶಾಸಕ ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ ಅವರುಗಳು ರಾಜ್ಯ ಸರ್ಕಾರದ ಗಮನ ಸೆಳೆದಿದ್ದೇವೆ. ಕೊಡಗಿನ ಬೇಡಿಕೆಯನ್ನು ಗಟ್ಟಿ ಧ್ವನಿಯಲ್ಲಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇವೆ. ಸರ್ಕಾರದಿಂದ ಯಾವ ರೀತಿಯಲ್ಲಿ ಸ್ಪಂದನೆ ಸಿಗಲಿದೆ ಎಂಬದನ್ನು ಕಾದು ನೋಡಬೇಕು ಎಂದರು.
ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದರು. ಅಕಾಡೆಮಿಯ ಸಂಚಾಲಕಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಪ್ರಸ್ತಾವಿಕವಾಗಿ ಮಾತನಾಡಿದರು. ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ, ಸ್ಥಾಪಕ ಅಧ್ಯಕ್ಷ ಮಂಡೇಟಿರ ಎ. ಪೊನ್ನಪ್ಪ, ಸೋಮವಾರಪೇಟೆ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಸಮಾಜಸೇವಕ ಮಂಡೀರ ಬೋಪಯ್ಯ, ಕೊಡವ ಸಮಾಜದ ಉಪಾಧ್ಯಕ್ಷ ಪಾಸುರ ಉತ್ತಪ್ಪ, ಖಜಾಂಚಿ ಬೋಪಣ್ಣ, ಚಲನಚಿತ್ರ ನಟಿ ತಾಪಂಡ ಕ್ರಿಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಏಳ್‍ನಾಡ್‍ನ ಇತಿಹಾಸ, ಸಾಂಸ್ಕøತಿಕ ಆಚಾರ ವಿಚಾರಗಳ ಬಗ್ಗೆ ನಾಲ್ಗುಡಿ ಸಂಸ್ಥೆಯ ಸಂಚಾಲಕ ಚಾಮೇರ ದಿನೇಶ್ ಅವರು ವಿಷಯ ಮಂಡಿಸಿದರು. ಅಕಾಡೆಮಿಯಿಂದ 3 ತಿಂಗಳಿಗೊಮ್ಮೆ ಹೊರತರುವ ‘ಪೊಂಗುರಿ-ಪುತ್ತರಿ ಸಂಚಿಕೆ’ಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಏಳ್‍ನಾಡ್ ವ್ಯಾಪ್ತಿಗೆ ಒಳಪಡುವ ಕೊಡವ ಸಮುದಾಯ ಬಾಂಧವರು, ಅಕಾಡೆಮಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ನಂತರ ಕೊಡವ ಆಚಾರ ವಿಚಾರಗಳನ್ನು ಒಳಗೊಂಡಿ ರುವ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.