ಮಡಿಕೇರಿ, ಡಿ. 29 : ರಾಷ್ಟ್ರಕವಿ ಕುವೆಂಪು ಅವರಂತೆ ಪ್ರತಿಯೊಬ್ಬರೂ ವಿಶ್ವಮಾನವರಾಗಿ, ಹಾಗೆಯೇ ಭಕ್ತ ಕನಕದಾಸರಂತೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಭಕ್ತ ಕನಕದಾಸ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮಡಿಕೇರಿ, ಡಿ. 29 : ರಾಷ್ಟ್ರಕವಿ ಕುವೆಂಪು ಅವರಂತೆ ಪ್ರತಿಯೊಬ್ಬರೂ ವಿಶ್ವಮಾನವರಾಗಿ, ಹಾಗೆಯೇ ಭಕ್ತ ಕನಕದಾಸರಂತೆ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಭಕ್ತ ಕನಕದಾಸ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೇಳಿದರು.
ಕನಕದಾಸರ ಕೀರ್ತನೆಗಳನ್ನು ಹಾಗೂ ಕುವೆಂಪು ಅವರು ಬರೆದಿರುವ ರಾಮಾಯಣ ದರ್ಶನಂ ಕಾವ್ಯ, ನಾಟಕಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಸಲಹೆ ಮಾಡಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ; ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಸಾಹಿತ್ಯವನ್ನು ಕುವೆಂಪು ರಚಿಸಿದ್ದಾರೆ. ಮಾನವ ಪರಿಕಲ್ಪನೆಯನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಪರಿಚಯಿಸಿದ ಕೀರ್ತಿ ಕುವೆಂಪು, ಕನಕದಾಸರಿಗೆ ಸಲ್ಲುತ್ತದೆ. ವೈಜ್ಞಾನಿಕ ತಳಹದಿಯ ಮೇಲೆ ಸಾಹಿತ್ಯ ರಚನೆ ಮಾಡಿದ್ದಾರೆ ಎಂದರು.
ಕುವೆಂಪು ಅವರ ಸಾಹಿತ್ಯದಲ್ಲಿ ಪ್ರಗತಿ ಪರ, ಮಾನವ ಪರ ಬರಹಗಳನ್ನು ಕಾಣಬಹುದಾಗಿದೆ ಎಂದರು. ಕುವೆಂಪು ಅವರು ರೈತ ಪರ, ನಾಡು, ನುಡಿ ಕನ್ನಡ ಭಾಷೆ ಮೇಲೆ ಅಪಾರ ಗೌರವ ಹೊಂದಿದ್ದರು. ಅದರಂತೆ ಸಾಹಿತ್ಯ ರಚಿಸುವ ಮೂಲಕ ಜನಮೆಚ್ಚುಗೆಗೆ ಪಾತ್ರರಾದರು ಎಂದರು.
ಹದಿನಾರನೇ ಶತಮಾನದಲ್ಲಿ ಬಾಳಿ ಬೆಳಗಿದ ಕನಕದಾಸರ ಕಾಲವನ್ನು ದಾಸ ಸಾಹಿತ್ಯದ ಸುವರ್ಣ ಯುಗವೆಂದು ಪರಿಗಣಿಸಲಾಗಿದೆ. ತಮ್ಮ ಸಮಕಾಲಿನ
(ಮೊದಲ ಪುಟದಿಂದ) ದಾಸರಂತೆ ಅವರು ನಡೆದ ದಾರಿಯಲ್ಲೇ ನಡೆಯದೆ, ಕನಕದಾಸರು ವೈಚಾರಿಕ ಮನೋಭಾವವನ್ನು ಭಿತ್ತಿದರು, ತಮ್ಮ ಸಮಕಾಲಿನ ಬದುಕಿನ ನೈಜ ಚಿತ್ರವನ್ನು ನೀಡಿದರು ಎಂದರು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಮಾತನಾಡಿ; ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಇಬ್ಬರು ಮಹಾನ್ ವ್ಯಕ್ತಿಗಳು ಶ್ರಮಿಸಿದ್ದಾರೆ. 16 ನೇ ಶತಮಾನದಲ್ಲಿ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಅಸಮಾತೋಲನ ಹೋಗಲಾಡಿಸಲು ಶ್ರಮಿಸಿದ್ದಾರೆ ಎಂದರು. ಇಪ್ಪತ್ತನೇ ಶತಮಾನದಲ್ಲಿ ದೇಶದಲ್ಲಿ ಉಂಟಾದ ಸಾಮಾಜಿಕ ಪರಿವರ್ತನೆಗಳು ಹಾಗೂ ಸವಾಲುಗಳನ್ನು ವಿಶ್ವ ಮಾನವ ಕುವೆಂಪು ಅವರ ಕಾದಂಬರಿಗಳು ಸೂಕ್ಷ್ಮವಾಗಿ ಕಟ್ಟಿಕೊಡುತ್ತವೆ. ಪ್ರತಿಯೊಬ್ಬರೂ ಕುವೆಂಪು ಅವರ ಕಥೆ, ಕಾದಂಬರಿ, ನಾಟಕ, ಕವಿತೆಗಳನ್ನು ಓದುವಂತಾಗಬೇಕು ಎಂದರು.
ಬಾಳೆಲೆ ಕಾಲೇಜಿನ ಉಪನ್ಯಾಸಕ ಜೆ. ಸೋಮಣ್ಣ ಮಾತನಾಡಿ ಕುವೆಂಪು ಯುಗದ ಕವಿ, ಜಗದ ಕವಿ ಎಂಬ ಹೆಸರು ಪಡೆದಿದ್ದಾರೆ. ಮನುಜ ಮತ, ವಿಶ್ವ ಪಥ, ವಿಶ್ವ ಮಾನವ ಸಂದೇಶ, ಕೊಳಲು, ಪಾಂಚಜನ್ಯ, ಜಲಗಾರ ಹೀಗೆ ಹಲವು ಕಥೆ, ಕವನ, ನಾಟಕ ಬರೆದಿದ್ದಾರೆ. ವಿಶ್ವ ಮಾನವತಾ ವಾದ, ವಿಶ್ವ ಮಾನವ ಧರ್ಮ, ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬುದನ್ನು ಕುವೆಂಪು ಅವರು ಪ್ರತಿಪಾದಿಸಿದ್ದರು ಎಂದರು.
ಸರಳ ವಿವಾಹಕ್ಕೆ ಒತ್ತು ನೀಡಿದ್ದ ಕುವೆಂಪು ಅವರು ಅಂತರ್‍ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು. ಜನಪರ ಹಾಗೂ ಮಾನವ ಪರವಾಗಿ ಸಮಾಜದಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸಿದರು ಎಂದು ಅವರು ಹೇಳಿದರು. ಕನಕದಾಸರು ದಾಸ ಕೀರ್ತನೆಗಳ ಮೂಲಕ ಸಮಾಜ ಪರಿವರ್ತನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜವನ್ನು ಆಧ್ಯಾತ್ಮಕ ತಳಹದಿಯ ಮೇಲೆ ಕಟ್ಟಲು ಪ್ರಯತ್ನಿಸಿದರು ಎಂದು ಜೆ.ಸೋಮಣ್ಣ ಅವರು ಹೇಳಿದರು. ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು, ಎರಡು ಮಹಾ ಕಾವ್ಯಗಳು ಸಾಹಿತ್ಯದ ಮೌಲ್ಯವನ್ನು ಪ್ರತಿಬಿಂಭಿಸುತ್ತದೆ. ಹಾಗೆಯೇ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ವಿಶ್ವ ವಿಖ್ಯಾತಿಯಾಗಿದೆ ಎಂದು ತಿಳಿಸಿದರು. ಕನಕದಾಸರು ‘ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆಯನೇನಾದರು ಬಲ್ಲಿರಾ? ಕುಲ ಕುಲವೆನ್ನತಿಹರು ಕುಲವ್ಯಾವದು ಸತ್ಯ ಸುಖವುಳ್ಳ ಜನರಿಗೆ ಆತ್ಮ ಯಾವ ಕುಲ-ಜೀವ ಯಾವ ಕುಲ ತತ್ವೇಂದ್ರಿಯ ಕುಲ ಪೇಳಿರಯ್ಯಾ’ ಹೀಗೆ ಕುಲ-ಗೋತ್ರಗಳ ಬಗ್ಗೆ ಕನಕದಾಸರು ಹೊಂದಿದ್ದ ನಿಲುವು ವೇದ್ಯವಾಗುತ್ತದೆ ಎಂದು ಅವರು ನುಡಿದರು.
ಕನಕದಾಸರು ಮೋಹನ ತರಂಗಿಣಿ (ಶೃಂಗಾರ ರಸಕಾವ್ಯ) ಮತ್ತು ನಳ ಚರಿತ್ರೆ (ನಳ ದಮಯಂತಿಯರ ಪ್ರೇಮ ಕಾವ್ಯ) ರಚಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದರು. ಜತೆಗೆ ಹರಿಭಕ್ತಸಾರ (ಅನುಭಾವ ಲಘು ಕಾವ್ಯ) ಮತ್ತು ರಾಮಧ್ಯಾನ ಚರಿತ್ರೆಗಳು ಕನಕದಾಸರ ವೈವಿದ್ಯಮಯ ಮತ್ತು ಜನಪರ ನಿಲುವಿಗೆ ಸಾಕ್ಷಿಯಂತಿದೆ ಎಂದು ಅವರು ಹೇಳಿದರು. ಹದಿನಾರನೇ ಶತಮಾನದಲ್ಲಿ ವಿಜಯನಗರ ಆಡಳಿತಕ್ಕೆ ಒಳಪಟ್ಟ ಬಾಡ ಪ್ರದೇಶದ ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವ ಮತ್ತು ಬಂಕಾಪುರ ಪ್ರದೇಶದಲ್ಲಿ ಹುಟ್ಟಿದ ಕನಕದಾಸರು ಸಾಮಾಜಿಕ ಸಮಾನತೆಗೆ ಶ್ರಮಿಸಿದರು ಎಂದರು.
ಜಿ.ಪಂ.ಸಿಇಓ ಕೆ.ಲಕ್ಷ್ಮಿಪ್ರಿಯ, ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಟಿ. ದರ್ಶನ್ ಸ್ವಾಗತಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿದರು. ಕಲಾವಿದ ಶಂಕರಯ್ಯ ನಾಡಗೀತೆ ಹಾಡಿದರು. ಪೌರಾಯುಕ್ತ ಎಂ.ಎಲ್. ರಮೇಶ್ ವಂದಿಸಿದರು. ಜಿ.ಪಂ. ಯೋಜನಾ ನಿರ್ದೇಶಕಿ ಸಂಧ್ಯಾ, ಸಹಾಯಕ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಬಾಬು, ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಗೋಪಾಲಕೃಷ್ಣ ಇತರರು ಇದ್ದರು