ಮಡಿಕೇರಿ, ಡಿ.29 : ಅಂಚೆ ವಿಮಾ ಪ್ರತಿನಿಧಿಗಳ ಆಯ್ಕೆ ಸಂಬಂಧ ನೇರ ಸಂದರ್ಶನವು ಜ. 14 ರಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡಗು ಅಧೀಕ್ಷಕರ ಕಚೇರಿ, ಕೊಡಗು ವಿದ್ಯಾಲಯದ ಬಳಿ, ಅಶೋಕಪುರ, ಮಡಿಕೇರಿ ಇಲ್ಲಿ ನಡೆಯಲಿದೆ. ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಎಸ್‍ಎಸ್‍ಎಲ್‍ಸಿ. ಪರೀಕ್ಷೆಯಲ್ಲಿ ಹಾಗೂ ಪಿಯುಸಿ ಉತ್ತೀರ್ಣರಾಗಿರಬೇಕು. 18 ರಿಂದ 60 ವರ್ಷದೊಳಗಿರಬೇಕು. ಹೆಚ್ಚಿನ ಮಾಹಿತಿಗೆ 08272-225796, 225496 ನ್ನು ಸಂಪರ್ಕಿಸಬಹದಾಗಿದೆ.