ಗೋಣಿಕೊಪ್ಪಲು, ಡಿ. 29: ಹೊಸ ವರ್ಷಾಚರಣೆ ಪ್ರಯುಕ್ತ ಇಲ್ಲಿನ ಕಾವೇರಿ ಹಿಲ್ಸ್ ಬಡವಾಣೆಯಲ್ಲಿ ಕಾವೇರಿ ಸಂಘದ ವತಿಯಿಂದ ಬಡವಾಣೆಯ ನಿವಾಸಿಗಳಿಗೆ 3ನೇ ವರ್ಷದ ಆಟೋಟ ಸ್ಪರ್ಧೆ ಹಾಗೂ ಹೊನಲು ಬೆಳಕಿನ ಶಟಲ್ ಬ್ಯಾಂಡ್ಮಿಂಟನ್ ಪಂದ್ಯಾಟ ನಡೆಯಿತು.

ಬಡಾವಣೆಯ ಮೈದಾನದಲ್ಲಿ ಬಲ್ಲಡಿಚಂಡ ಪೊನ್ನಪ್ಪ ಸ್ಮರಣಾರ್ಥ ನೆರವೇರಿದ ಹೊನಲು ಬೆಳಕಿನ ಶಟಲ್ ಬ್ಯಾಂಡ್ಮಿಂಟನ್ ಪಂದ್ಯಾಟಕ್ಕೆ ಸಹಾಯಕ ಉಪ ನಿರೀಕ್ಷಕ ಹೊಂಬಾಳಯ್ಯ ಚಾಲನೆ ನೀಡಿದರು.

ಬಡವಾಣೆಯ ಸುಮಾರು 35 ಕ್ರೀಡಾಪಟುಗಳು ಶಟಲ್ ಪಂದ್ಯಾಟದಲ್ಲಿ ಭಾಗವಹಿಸಿದರು. ಮಹಿಳೆಯರಿಗಾಗಿ ಸಂಗೀತ ಕುರ್ಚಿ, ಲೆಮೆನ್ ಆ್ಯಂಡ್ ಸ್ಪೂನ್, ಮಕ್ಕಳಿಗೆ ಓಟ, ಸ್ಲೋ ಸೈಕ್ಲಿಂಗ್, ಪುಟಾಣಿಗಳಿಗೆ ಕಾಳು ಹೆಕ್ಕುವ ಆಟ, ಬಾಲ್ ಇನ್ ದಿ ಬಕೆಟ್ ಸ್ಪರ್ಧೆಗಳು ಆಯೋಜನೆಗೊಂಡಿದ್ದವು. ಬಡಾಣೆಯ ನೂರಾರೂ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸಂಘದ ಅಧ್ಯಕ್ಷ ಥೋಮಸ್, ಕಾರ್ಯದರ್ಶಿ ರಫೀಕ್, ಖಜಾಂಜಿ ಚೋನಿರ ಸತ್ಯ, ನಿರ್ದೇಶಕರು ಗಳಾದ ತಿರುನೆಲ್ಲಿಮಾಡ ಜೀವನ್, ರವಿ, ಅನಿಲ್, ಮಾಚಿಮಾಡ ಭೀಮಯ್ಯ, ಗಾಣಂಗಡ ಪೆಮ್ಮಯ್ಯ, ಗಣೇಶ್, ಕ್ರೀಡಾ ಸಮಿತಿಯ ಹರೀಶ್, ಪ್ರಜೇಶ್ ಇದ್ದರು.

ಪಂದ್ಯಾಟದ ವಿಜೇತರು: ಎಲ್‍ಕೆಜಿ, ಯುಕೆಜಿ ವಿಭಾಗದ ಓಟದಲ್ಲಿ ಹಿತಾರ್ಥ್ (ಪ್ರಥಮ), ಹಿಥನ್ (ದ್ವಿತೀಯ), ನಾತೀಫ್ (ತೃತೀಯ), 1 ರಿಂದ 3ನೇ ತರಗತಿ ವಿಭಾಗದಲ್ಲಿ ರಿಷಿತ್ (ಪ್ರ), ವಿಪುಲ್ (ದ್ವಿ), ಶಾದೀಲ್ (ತೃ), 4 ರಿಂದ 6 ನೇ ತರಗತಿ ವಿಭಾಗದಲ್ಲಿ ತನೀಶ್(ಪ್ರ), ಸ್ನೇಹಲ್ (ದ್ವಿ), ಮಿಲನ್ (3), 7 ರಿಂದ 9ನೇ ತರಗತಿ ವಿಭಾಗದಲ್ಲಿ ಶಿಬಿಲ್ (ಪ್ರ), ವರ್ಷಿತ್ (ದ್ವಿ), ದಕ್ಷಿತ್ (ತೃ), 10 ರಿಂದ ಪಿಯುಸಿ ವಿಭಾಗದಲ್ಲಿ ಗಣಪತಿ (ಪ್ರ), ಗಫೂರ್ (ದ್ವಿ), 2 ರಿಂದ 4ನೇ ತರಗತಿ ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಶಿಫಾನ (ಪ್ರ), ವರ್ಷಿತಾ (ದ್ವಿ), ಗಾಯನ (ತೃ), 5 ರಿಂದ 7ನೇ ತರಗತಿ ವಿಭಾಗದಲ್ಲಿ ತಬ್ಬು (ಪ್ರ), ಅರ್ಪಿತಾ (ದ್ವಿ), ಭೂಮಿಕಾ (ತೃ), 5 ರಿಂದ 7ನೇ ತರಗತಿ ವಿಭಾಗದಲ್ಲಿ ನಡೆದ ಸ್ಲೋ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಜ್ಮಲ್ (ಪ್ರ), ದಕ್ಷಿತ್ (ದ್ವಿ), 8 ರಿಂದ 10ನೇ ತರಗತಿ ವಿಭಾಗದಲ್ಲಿ ಪ್ರಜ್ವಲ್ (ಪ್ರ), ದರ್ಶನ್ (ದ್ವಿ), ಪದವಿ ಪೂರ್ವ ವಿಭಾಗದಲ್ಲಿ ಗಣಪತಿ (ಪ್ರ), ಗಫೂರ್ (ದ್ವಿ), ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಆಫಿಯಾ (ಪ್ರ), ಮಹಮ್ಮದ್ ಹರ್ಷಿ (ದ್ವಿ), ದುೃವ (ತೃ), ಮಹಿಳೆಯರಿಗೆ ನಡೆದ ಲೆಮೆನ್ ಸ್ಪೂನ್ ಸ್ಪರ್ಧೆಯಲ್ಲಿ ನ್ಯಾನ್ಸಿ (ಪ್ರ), ರವಿ ರಾಜೇಶ್ವರಿ (ದ್ವಿ), ಬಿಂದು (ತೃ), ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ತಫ್ಸೀದಾ (ಪ್ರ), ಮೋಕ್ಷ (ಪ್ರ), ನೇತ್ರಾ (ತೃ), ಬಲ್ಲಡಿಚಂಡ ಪೊನಪ್ಪ ಸ್ಮರಣಾರ್ಥ ನಡೆದ ಹೊನಲು ಬೆಳಕಿನ ಶಟಲ್ ಬ್ಯಾಂಡ್ಮಿಂಟನ್ ಪಂದ್ಯಾವಳಿಯ ಡಬಲ್ಸ್ ಬಾಲಕಿಯರ ವಿಭಾಗದಲ್ಲಿ ಭೂಮಿಕ, ವರ್ಷಿತಾ (ಪ್ರ), ಪ್ರೇಕ್ಷಾ, ತಬ್ಬು (ದ್ವಿ), 4 ರಿಂದ 7 ನೇ ತರಗತಿ ಬಾಲಕರ ವಿಭಾಗದಲ್ಲಿ ಮಿಲನ್, ಧಕ್ಷಿತ್ (ಪ್ರ), ತನೀಶ್, ಸ್ನೇಹಲ್ (ದ್ವಿ), ಪದವಿ ಪೂರ್ವ ವಿಭಾಗದಲ್ಲಿ ಬಿಷನ್, ಗಣಪತಿ (ಪ್ರ), ನಿತಿನ್, ದರ್ಶನ್ (ದ್ವಿ), ದಂಪತಿಗಳ ವಿಭಾಗದಲ್ಲಿ ರಫೀಕ್, ತಫ್ಸೀದಾ (ಪ್ರ್ರ), ಹರೀಶ್, ಜಿಷಾ (ದ್ವಿ), ಮಹಿಳೆಯರ ವಿಭಾಗದಲ್ಲಿ ಕಾವೇರಿ, ಯೋಗಿತಾ (ಪ್ರ), ಇಂದುಶ್ರೀ, ನ್ಯಾನ್ಸಿ (ದ್ವಿ), ಪುರುಷರ ವಿಭಾಗದಲ್ಲಿ ಅಣ್ಣಯ್ಯ, ಜುನೈಜ್ (ಪ್ರ), ಸಜಿತ್, ಹರೀಶ್ (ದ್ವಿ), ಸ್ಥಾನ ಗಳಿಸಿಕೊಂಡರು.