ಮಡಿಕೇರಿ, ಡಿ. 29: ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘಗಳ ಆಶ್ರಯದಲ್ಲಿ ಶ್ರೀಮಠ ಬಾಳೆ ಕುಂದ್ರು ಪೀಠಾಧ್ಯಕ್ಷರುಗಳಾದ ಶ್ರೀ ನರಸಿಂಹ ಸ್ವಾಮೀಗಳ ಉಪಸ್ಥಿತಿಯಲ್ಲಿ ತಾ. 30 ರಂದು (ಇಂದು) ಕೋಟಿ ಗಾಯತ್ರಿ ಪುನಃಶ್ಚರಣೆಯಾಗ ಏರ್ಪಡಿಸಲಾಗಿದೆ. ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಮೂರ್ನಾಡು ಬಳಿಕ ಕಣ್ಣಬಲಮುರಿಯ ಕಣ್ವ ಮುನೀಶ್ವರ ಕ್ಷೇತ್ರದಲ್ಲಿ ಯಾಗ ನಡೆಯಲಿದೆ. ಮಹಾಗಣಪತಿ ಹೋಮ, ಕಾವೇರಿ ಪೂಜೆ, ಸವಿತಾರ್ಣೆ, ಕಲಶ ಸ್ಥಾಪನೆ ಯಾಗದ ಅಗ್ನಿ ಸ್ಥಾಪನೆಯೊಂದಿಗೆ ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ, 1 ಗಂಟೆಗೆ ತೀರ್ಥ ಪ್ರಸಾದ ವಿತರಣೆ ನಂತರ ಅನ್ನದಾನ ನೆರವೇರಲಿದೆ.