ಭಾಗಮಂಡಲ, ಡಿ. 27: ಅಯ್ಯಪ್ಪ ವ್ರತಧಾರಿಗಳ ವಿಶೇಷ ಮಂಡಲ ಪೂಜೆ ಜರುಗಿತು. ಭಾಗಮಂಡಲದ ಅಯ್ಯಪ್ಪ ಬನದಲ್ಲಿ ಪೂಜೆ ಸಲ್ಲಿಸಿ ಬಳಿಕ ತ್ರಿವೇಣಿ ಸಂಗಮದವರೆಗೆ ಮೆರವಣಿಗೆ ಮೂಲಕ ಆಗಮಿಸಿದ ಮಾಲಾಧಾರಿಗಳು ಅಯ್ಯಪ್ಪ ನಾಮಸ್ಮರಣೆಯೊಂದಿಗೆ ಮಂಡಲ ಪೂಜೆ ನೆರವೇರಿಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಗುರುಸ್ವಾಮಿಗಳಾದ ಸಿ.ಆರ್.ಜಯಂತ್, ವಸಂತ, ದಾಮೋದರ, ಪ್ರದೀಶ ಸಮ್ಮುಖದಲ್ಲಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.