ಮಡಿಕೇರಿ, ಡಿ. 27: ಕಾಟಕೇರಿ ಬಳಿ ಮಂಗಳೂರು ಹೆದ್ದಾರಿ ಬದಿ ಮದೆ ನಿವಾಸಿ ಹುದೇರಿ ಲೋಕೇಶ್ ಎಂಬವರು ತನ್ನ ಸ್ಕೂಟರ್ (ಕೆಎ 03 ಇಎಲ್ 849) ನಿಲ್ಲಿಸಿಕೊಂಡು ಇಸ್ಮಾಯಿಲ್ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ವೇಗವಾಗಿ ಬಂದ ಕಾರೊಂದು (ಕೆಎ 09 ಎಂಇ 0014) ಡಿಕ್ಕಿಪಡಿಸಿ ಗಾಯಗೊಳಿಸಿದೆ. ಆರೋಪಿ ಚಾಲಕ ಕಾರನ್ನು ಬಿಟ್ಟು ಪರಾರಿಯಾಗಿದ್ದು, ಗಾಯಾಳುಗಳನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಸಂಚಾರಿ ಠಾಣಾ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.