ವೀರಾಜಪೇಟೆ, ಡಿ. 27: ಕಳೆದ ನಾಲ್ಕು ದಿನಗಳಿಂದ ವೀರಾಜಪೇಟೆಯ ಕ್ರಿಕೆಟ್ ಪ್ರೇಮಿಗಳಿಗೆ ಪಂದ್ಯಾಟದ ಮನರಂಜನೆ ನೀಡಿದ್ದ ಪ್ರೀಮಿಯರ್ ಲೀಗ್‍ನÀ ಚೊಚ್ಚಲ ಕಪ್‍ನ್ನು ವೀರಾಜಪೇಟೆಯ ಕೌಬಾಯ್ಸ್ ತಂಡವು ತನ್ನ ಮುಡಿಗೇರಿಸಿಕೊಂಡಿದೆ.

ಸಂತ ಅನ್ನಮ್ಮ ಶಾಲಾ ಮೈದಾನದಲ್ಲಿ ಯೂತ್ ಫ್ರೆಂಡ್ಸ್ ವತಿಯಿಂದ ಮೊದಲ ಬಾರಿಗೆ ಐಪಿಎಲ್ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದ ಅಂತಿಮ ಪಂದ್ಯದಲ್ಲಿ ಕೌಬಾಯ್ಸ್ ತಂಡವು, ರೀಶೇಫ್ ಫಿಟ್ನೆಸ್ ತಂಡವನ್ನು 26 ರನ್ನುಗಳಿಂದ ಮಣಿಸುವ ಮೂಲಕ ಗೆಲವನ್ನು ತನ್ನದಾಗಿಸಿಕೊಂಡಿತು.

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕೌಬಾಯ್ಸ್ ತಂಡವು ನಿಗಧಿತ 10 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿತು. ಪಂದ್ಯಾಟzಲ್ಲಿ 116 ರನ್ನುಗಳನ್ನು ನಿರೀಕ್ಷಿಸಿದ್ದ ರೀಶೇಫ್ ಫಿಟ್ನಸ್ ತಂಡವು ನಿಗಧಿತ 10 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 89 ರನ್‍ಗಳನ್ನು ಗಳಿಸಿ ರನ್ನರ್ಸ್‍ಗೆ ತೃಪ್ತಿಪಡಬೇಕಾಯಿತು.

ವಿವಿಧ ಪ್ರಾಂಚೈಸಿಗಳ ಮಾಲೀಕತ್ವದ 10 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ರೀಶೇಫ್ ಫಿಟ್ನೆಸ್ ಕ್ಲಬ್, ರಾಯಲ್ ರಜತಾದ್ರಿ ಹಾಗೂ, ಕೌಬಾಯ್ಸ್, ಚಾಲೆಂಜರ್ಸ್ ತಂಡಗಳು ಎರಡನೇ ಸುತ್ತಿಗೆ ಅರ್ಹತೆ ಪಡೆದಿದ್ದವು.

ವೈಯಕ್ತಿಕ ಪ್ರಶಸ್ತಿಗಳು : ಉತ್ತಮ ಆಲ್‍ರೌಂಡರ್ ಮತ್ತು ಪಂದ್ಯಶ್ರೇಷ್ಟ ನಾಸೀರ್, ಉತ್ತಮ ಬ್ಯಾಟ್ಸ್‍ಮನ್ ಬಿಜು, ಉತ್ತಮ ಬೌಲರ್ ನಿಸಾರ್, ಉದಯೋನ್ಮುಖ ಆಟಗಾರ ಶಕೀಲ್, ಉತ್ತಮ ಕ್ಷೇತ್ರ ರಕ್ಷಕ ಇಂತಿಯಾಸ್, ಉತ್ತಮ ವಿಕೆಟ್ ಕೀಪರ್ ಸೃಜನ್, ಉತ್ತಮ ಕ್ಯಾಚ್ ಶಬರೀಸ್, ಸ್ಟೈಲಿಸ್ ಆಟಗಾರ ಫರ್ಹಾನ್, ಅಧಿಕ ಸಿಕ್ಸ್ ಬಾರಿಸಿದ ಆಟಗಾರ ನಾಸೀರ್ ವಿಶೇಷ ಬಹುಮಾನಗಳನ್ನು ಪಡೆದುಕೊಂಡರು.

ವಿಜೇತ ತಂಡ ನಿನ್ನೆ ರಾತ್ರಿ ಇಲ್ಲಿನ ಮುಖ್ಯ ಬೀದಿಗಳಲ್ಲಿ ಗೆಲವಿನ ಮೆರವಣಿಗೆ ನಡೆಸಿತು.