ಪೆರಾಜೆ, ಡಿ.28: ಇಲ್ಲಿಯ ಶ್ರೀ ಶಾಸ್ತಾವು ಕ್ಷೇತ್ರದ ನಾಗ ಸಾನಿಧ್ಯದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತಾಯ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ನಾಗ ಪುನರ್‍ಪ್ರತಿಷ್ಠೆ ಕಾರ್ಯಕ್ರಮವು ಜರುಗಿತು.

ಈ ಕಾರ್ಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರಾದ ವಿಶ್ವನಾಥ್ ಕುಂಬಳಚೇರಿ, ಶ್ರೀ ಶಾಸ್ತಾವು ದೇವಸ್ಥಾನ ಪ್ರಧಾನ ಅರ್ಚಕರಾದ ಕೆ.ವೆಂಕಟ್ರಮಣ ಪಾಂಙಣ್ಣಾಯ, ಮಡಿಕೇರಿ ತಾ. ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಮತ್ತು ಊರಿನ ತಕ್ಕ ಮುಖ್ಯಸ್ಥರುಗಳು, ದೇವಸ್ಥಾನದ ಆಡಳಿತದ ಮಂಡಳಿಯ ಪದಾಧಿಕಾರಿಗಳು ಇದ್ದರು.