ಕೂಡಿಗೆ, ಡಿ. 28: ಕುಶಾಲನಗರದ ತಮಿಳು ಸಂಘದ ನೂತನ ಅಧ್ಯಕ್ಷರಾಗಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಕಾರ್ತೀಷನ್, ಉಪಾಧ್ಯಕ್ಷರಾಗಿ ದೊರೆಸ್ವಾಮಿ ಹಾಗೂ ಗಣೇಶ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಶಿವಕುಮಾರ್, ಸಹಕಾರ್ಯದರ್ಶಿ ಮುರುಗೇಶ್ ಹಾಗೂ ಗುಜೇಂದ್ರ, ಖಜಾಂಚಿಯಾಗಿ ಪ್ರತಾಪ್, ಸಂಘಟನಾ ಕಾರ್ಯದರ್ಶಿಯಾಗಿ ಡಿ. ಸಂತೋಷ್ ಹಾಗೂ ನಿರ್ದೇಶಕರುಗಳಾಗಿ ಬಾಲಕೃಷ್ಣ, ಮಣಿಕಂಠ, ವೇಲನ್ ಆಯ್ಕೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳು ಹಾಜರಿದ್ದರು.