ಮಡಿಕೇರಿ, ಡಿ. 28: ಮಡಿಕೇರಿಯಲ್ಲಿರುವ ಇ.ಸಿ.ಹೆಚ್.ಎಸ್. ಪಾಲಿಕ್ಲಿನಿಕ್ ತಾ. 31 ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಮುಚ್ಚಲ್ಪಟ್ಟಿರುತ್ತದೆ. ಆದರೆ ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.
ತಾ. 31 ರ ನಂತರ ಹಳೆಯ 16 ಕೆಬಿ ಸ್ಮಾರ್ಟ್ ಕಾರ್ಡ್ ಹಾಗೂ ತಾತ್ಕಾಲಿಕ ಸದಸ್ಯತ್ವದ ರಶೀತಿಯು ಮಾನ್ಯತೆ ಕಳೆದುಕೊಳ್ಳುತ್ತದೆ. ಆದ್ದರಿಂದ ಎಲ್ಲಾ ಇ.ಸಿ.ಹೆಚ್.ಎಸ್. ಸದಸ್ಯರು ಹೊಸ 64 ಕೆಬಿ ಕಾರ್ಡನ್ನು ಮಾಡಬೇಕಾಗಿ ಹಾಗೂ ಅದರ ತಾತ್ಕಾಲಿಕ ರಶೀತಿಯನ್ನು ಪಡೆದು ಇ.ಸಿ.ಹೆಚ್. ಆಫೀಸರ್ ಇನ್‍ಚಾರ್ಜ್ ಅವರ ಸಹಿಯನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆ ತಿಳಿಸಿದೆ.