ಸಚಿವ ಸಾರಾ ಮಹೇಶ್ ಟೀಕೆ
ಮಡಿಕೇರಿ, ಡಿ. 27: ಸಮ್ಮಿಶ್ರ ಸರಕಾರದಲ್ಲಿ ಸೂಟ್ಕೇಸ್ನಲ್ಲಿ ಹಣ ಹೋದ್ರೆ ಸಚಿವ ಸ್ಥಾನ ಸಿಗುತ್ತೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿರುವ ಪ್ರವಾಸೋದ್ಯಮ ಹಾಗೂ ಕೊಡಗು ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಣದಿಂದ ಸಚಿವ ಸ್ಥಾನ ಪಡೆಯುವದು ಬಿಜೆಪಿಯ ಸಂಪ್ರದಾಯ ಎಂದು ಟೀಕಿಸಿದರು.
ನಗರದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸರಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಅಂತ ದಿನಗಣನೆಯಲ್ಲಿ ತೊಡಗಿದ್ದಾರೆ. ಅವರುಗಳು ದಿನ ಲೆಕ್ಕ ಹಾಕುತ್ತಿದ್ದಂತೆಯೆ ಸಮ್ಮಿಶ್ರ ಸರಕಾರ ಐದು ವರ್ಷ ಆಡಳಿತ ಪೂರ್ಣಗೊಳಿಸಲಿದೆ ಎಂದು ಸಚಿವರು ಹೇಳಿದರು. ಮೈತ್ರಿ ಸರಕಾರ 24 ಗಂಟೆಯಲ್ಲಿ ಪತನವಾಗಲಿದೆ ಎಂದು ಉಮೇಶ್ ಕತ್ತಿ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮಹೇಶ್ ಬಹುಶಃ ಉಮೇಶ್ ಕತ್ತಿಯವರು ಕೇಂದ್ರ ಸರಕಾರದ ಬಗ್ಗೆ ಹೇಳಿಕೆ ನೀಡಿರಬೇಕೆಂದು ವ್ಯಂಗವಾಡಿದರು.