ಕುಶಾಲನಗರ, ಡಿ. 27: ಕುಶಾಲನಗರ ಸೇರಿದಂತೆ ಕೂಡಿಗೆ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಉತ್ತಮ ಮಳೆಯಾಗಿದೆ. ಸಂಜೆ ಮೋಡ ಕವಿದ ವಾತಾವರಣದೊಂದಿಗೆ ಆರಂಭವಾದ ಮಳೆ ಅರ್ಧ ಗಂಟೆಗಳ ಕಾಲ ಸುರಿಯಿತು. ದಿಢೀರ್ ಸುರಿದ ಮಳೆಯಿಂದ ಸಾರ್ವಜನಿಕರು, ರೈತಾಪಿ ವರ್ಗ ಕಂಗಾಲಾಯಿತು. ರೈತರು ಭತ್ತ ಸೇರಿದಂತೆ ತಮ್ಮ ಬೆಳೆಗಳ ಸಂರಕ್ಷಣೆಗೆ ಪರದಾಡುವ ಸ್ಥಿತಿ ನಿರ್ಮಾಣಗೊಂಡಿತ್ತು.