ಮಡಿಕೇರಿ, ಡಿ. 27: ರಕ್ತದಾನದ ಮಹತ್ವವನ್ನು ತಿಳಿದುಕೊಳ್ಳುವ ಮೂಲಕ ಪ್ರತಿಯೊಬ್ಬರು ಜೀವ ರಕ್ಷಣೆಯ ಮಹತ್ಕಾರ್ಯಕ್ಕೆ ಮುಂದಾಗಬೇಕೆಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದ್ದಾರೆ.
ಮೇಕೇರಿಯ ಸ್ವಾಗತ ಯುವಕ ಸಂಘ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸಂಕಲ್ಪ ಸೇ ಸಿದ್ಧಿ ನವ ಭಾರತಕ್ಕಾಗಿ ಯುವ ಸಬಲೀಕರಣ ಮತ್ತು ರಾಷ್ಟ್ರೀಯ ಉತ್ತಮ ಆಡಳಿತ ದಿನದ ಪ್ರಯುಕ್ತ 7ನೇ ವರ್ಷದ ಗ್ರಾಮೀಣ ಮಟ್ಟದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಮೇಕೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೆ.ಜಿ. ಬೋಪಯ್ಯ, ರಕ್ತದಾನ ಮಹಾದಾನವಾಗಿದ್ದು, ಪ್ರತಿಯೊಬ್ಬರಿಗೂ ಇದರ ಬಗ್ಗೆ ಅರಿವಿರಬೇಕೆಂದರು. ದೇಶದ ಮಹಾನ್ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸಂದರ್ಭದಲ್ಲಿ ರಕ್ತದಾನ ಶಿಬಿರ ಮತ್ತು ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಿ ರುವದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ರಕ್ತದಾನ ದಿಂದ ಒಂದು ಜೀವವನ್ನು ಉಳಿಸುವ ಶಕ್ತಿಯಿದ್ದು, ರೋಗಿಗಳು ಸಂಕಷ್ಟ ದಲ್ಲಿದ್ದಾಗ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಡಿಕೇರಿ ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ, ಯುವ ಸಮೂಹ ಸಮಾಜಮುಖಿ ಕಾರ್ಯಗಳೊಂದಿಗೆÀ ಆರೋಗ್ಯ ಸಂಬಂಧಿತ ಕಾರ್ಯಕ್ರಮ ಗಳಿಗೂ ಒತ್ತು ನೀಡಬೇಕೆಂದರು.
ರಕ್ತನಿಧಿ ಕೇಂದ್ರದ ಡಾ. ಶಾಲಿನಿ ಮಾತನಾಡಿ, ರಕ್ತದಾನ ಏಕೆ ಮಾಡಬೇಕು, ರಕ್ತದಾನದಿಂದಾಗುವ ಉಪಯೋಗಗಳೇನು ಹಾಗೂ ಯಾವ ಸಂದರ್ಭ ರಕ್ತದಾನ ಮಾಡಬಹುದು ಎಂಬದರ ಕುರಿತು ಮಾಹಿತಿ ನೀಡಿದರು.
ಕಾರ್ಮಿಕ ನಿರೀಕ್ಷಕ ಯತ್ನಿಠ ಮಾತನಾಡಿ, ಗುರುತಿನ ಚೀಟಿ ಹೊಂದಿದ ಕಾರ್ಮಿಕರಿಗೆ ರಾಜ್ಯ ಸರ್ಕಾರದಿಂದ ಸಿಗುವ ಕಾರ್ಮಿಕ ಇಲಾಖೆ ಮೂಲಕ ಸಿಗುವ 12 ಪ್ರಮುಖ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಅಲ್ಲದೆ ಗುರುತಿನ ಚೀಟಿ ಹೊಂದುವದರಿಂದ ಆಗಬಹುದಾದ ಲಾಭದ ಬಗ್ಗೆ ವಿವರಿಸಿದರು.
ರೋಟರಿ ಮಿಸ್ಟಿಹಿಲ್ಸ್ನ ಅಧ್ಯಕ್ಷ ರವಿಶಂಕರ್ ಮಾತನಾಡಿ, ರೋಟರಿ ಯಿಂದ ಕಾರ್ಮಿಕ ಸಮುದಾಯ ದವರಿಗೆ ಇರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಸಂಘದ ಪ್ರಮುಖ ಟಿ.ವಿ. ಲೋಕೇಶ್ ಶಿಬಿರ ಮತ್ತು ಸಂಘದ ಚಟುವಟಿಕೆಗಳ ಬಗ್ಗೆ ತಿಳಿಸಿದರು.
ಭಾರತೀಯ ಮಜ್ದೂರ್ ಸಂಘದ ಅಧ್ಯP್ಷÀ ಸೂದನ ಸತೀಶ್, ಮೇಕೇರಿ ಗ್ರಾ.ಪಂ. ಅಧ್ಯಕ್ಷೆ ಕೆ.ಕೆ. ಜಯಂತಿ, ಉಪಾಧ್ಯಕ್ಷ ಕೆ.ಎಸ್. ಭೀಮಯ್ಯ, ಸದಸ್ಯರಾದ ಅನುಸೂಯ, ಅರ್ಪಿತ ಸಂಧ್ಯ್ಯಾ, ಪಿ.ಯು. ರಕ್ಷಿತ್, ಪುಷ್ಪ, ನಾಣಯ್ಯ, ಇಂದಿರಾ ರೈ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಟಿ.ವಿ. ಲೋಕೇಶ್ ಮಾಹಿತಿ ನೀಡಿದರು. ಎಸ್. ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ಟಿ.ಎಸ್. ಶ್ರೇಯಸ್ ವಂದಿಸಿದರು. ಎಂ.ಆರ್. ಜಿತಿನ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ವತಿಯಿಂದ ಸುಮಾರು 100 ಕಾರ್ಮಿಕರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.