ಸಂಪಾಜೆ, ಡಿ. 28: ಲಯನ್ಸ್ ಕ್ಲಬ್ ಸಂಪಾಜೆ ವತಿಯಿಂದ ಪ್ರಾಂತೀಯ ಸಮ್ಮೇಳನದ ಸಲುವಾಗಿ ರಾಜ್ಯಪಾಲರ ಕಾರ್ಯಕ್ರಮಗಳ ಸಪ್ತಾಹ “ಸಂಪ್ರೀತಿ” ಅಡಿಯಲ್ಲಿ ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ಡ್ರಗ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಕ್ಲಬ್‍ನ ಅಧ್ಯಕ್ಷ ಇ.ವಿ. ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ಡಾ. ಕುಮಾರ ಸುಬ್ರಮಣ್ಯ ಕಾರ್ಯಕ್ರಮದಲ್ಲಿ ಡ್ರಗ್ಸ್ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಿದರು. ವೇದಿಕೆಯಲ್ಲಿ ಕ್ಲಬ್‍ನ ಕಾರ್ಯದರ್ಶಿ ನಳಿನಿ ಕಿಶೋರ್ ಹಾಗೂ ಖಜಾಂಚಿ ಧನು ನವೀನ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.