ಮಡಿಕೇರಿ, ಡಿ. 27: ಕೇಂದ್ರ ಸಾಹಿತ್ಯ ಅಕಾಡೆಮಿಯ ವತಿಯಿಂದ ಮೂರು ದಿನಗಳ ಕಾಲ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈಶಾನ್ಯ ಹಾಗೂ ದಕ್ಷಿಣ ಭಾರತದ ಭಾಷೆಗಳ ಕವನಗಳ ಅನುವಾದ ಕಾರ್ಯಾಗಾರಕ್ಕೆ (ಓoಡಿಣh-ಇಚಿsಣ ಚಿಟಿಜ Souಣheಡಿಟಿ Iಟಿಣeಡಿಜಿಚಿಛಿe) ಪೂಮಾಲೆ ಕೊಡವ ವಾರಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರನ್ನು ಆಹ್ವಾನಿಸಲಾಗಿತ್ತು.

ಈ ಕಾರ್ಯಾಗಾರದಲ್ಲಿ ಈಶಾನ್ಯ ರಾಜ್ಯಗಳ ಹಾಗೂ ದಕ್ಷಿಣ ರಾಜ್ಯಗಳ ರಾಜ್ಯಭಾಷೆಗಳೊಂದಿಗೆ ಕರ್ನಾಟಕದಲ್ಲಿ ಕನ್ನಡದ ಜೊತೆಗೆ ಕೊಡವ ಹಾಗೂ ತುಳು ಭಾಷೆಗಳಿಗೆ ಮಾನ್ಯತೆ ನೀಡಲಾಗಿತ್ತು ಪ್ರತೀ ಭಾಷೆಗಳ ಐದು ಕವನಗಳನ್ನು ಕಾರ್ಯಾಗಾರದಲ್ಲಿ ತರ್ಜುಮೆಗೊಳಿಸಿ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಇತರೆ ಭಾಷೆಗಳಲ್ಲಿ ಪ್ರಕಟಗೊಳಿಸಲಾಗಿತ್ತು. ಕೊಡವ ಭಾಷೆಯಿಂದ ಐದು ಕವನಗಳನ್ನು ಆಯ್ಕೆ ಮಾಡಲಾಗಿತ್ತು ಇವುಗಳನ್ನು ಇಂಗ್ಲೀಷ್ ಭಾಷೆಗೆ ತರ್ಜುಮೆಗೊಳಿಸುವದೇ ಅಲ್ಲದೆ ಕವನ ಸಾಹಿತ್ಯದ ವಿಚಾರವಾಗಿ ಅನಿಸಿಕೆಗಳನ್ನು ಹಂಚಿಕೊಳ್ಳಲಾಯಿತು.