*ಸಿದ್ದಾಪುರ, ಡಿ. 27: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯ ಎರಡು ವಾರ್ಡ್‍ಗಳಿಗೆ ಜನವರಿ 2 ರಂದು ಚುನಾವಣೆ ನಡೆಯಲಿದೆ. 2ನೇ ವಾರ್ಡ್‍ನ ಸದಸ್ಯರಾಗಿದ್ದ ಮೊಹಮದ್ ಬಾಪುಟ್ಟಿ ಮತ್ತು 3ನೇ ವಾರ್ಡ್‍ನ ಸದಸ್ಯೆಯಾಗಿದ್ದ ಶ್ರುತಿ ಎಂಬ ಮಹಿಳೆಗೆ ಸರ್ಕಾರಿ ಉದ್ಯೋಗ ಲಭಿಸಿದ ಹಿನ್ನೆಲೆ ಎರಡು ಸ್ಥಾನಗಳು ತೆರವಾಗಿತ್ತು. 2ನೇ ವಾರ್ಡ್‍ಗೆ ಮೊಹಮದ್ ಬಾಪುಟ್ಟಿ ಮಗ ಕಾಂಗ್ರೆಸ್ ಬೆಂಬಲಿತನಾಗಿ ಸ್ಪರ್ಧಿಸಿದ್ದು ಭಾರತೀಯ ಜನತಾ ಪಕ್ಷದಿಂದ ಪಿ.ಆರ್. ಮೋಹನ್ ಮತ್ತು ಸಿ.ಪಿ.ಎಂ.ನಿಂದ ಮೋಣಪ್ಪ ಸ್ಪರ್ಧಿಸುತ್ತಿದ್ದಾರೆ. 3ನೇ ವಾರ್ಡ್‍ನಿಂದ ಭಾರತೀಯ ಜನತಾ ಪಕ್ಷ ಬೆಂಬಲಿತ ಪರಿಶಿಷ್ಟ ಪಂಗಡದ ಮಹಿಳೆ ಮಲ್ಲಿ ಜೋಗಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಂಗಳ ಸ್ಪರ್ಧಿಸುತ್ತಿದ್ದಾರೆ.