ಗೋಣಿಕೊಪ್ಪ ವರದಿ, ಡಿ. 26: ಆಲ್‍ಇಂಡಿಯಾ ಅಂತರ್ ವಿಶ್ವ ವಿದ್ಯಾಲಯ ಮಟ್ಟದ ಮಹಿಳೆಯರ ಹಾಕಿ ಟೂರ್ನಿ ಕೊಡಗಿನ ಆಟಗಾರರಿರುವ ಮಂಗಳೂರು ವಿಶ್ವ ವಿದ್ಯಾಲಯ ತಂಡವು ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿದೆ.

ಒಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬರ್ಕತುಲಹ್ ವಿವಿ ತಂಡವನನು 3-1 ಗೋಲುಗಳ ಮೂಲಕ ಮಣಿಸುವ ಮೂಲಕ ಶುಭಾರಂಭ ಮಾಡಿತು. ಮಲ್ಲಮಾಡ ಲೀಲಾವತಿ 39 ಹಾಗೂ 42 ನೇ ನಿಮಿಷಗಳಲ್ಲಿ 2 ಗೋಲು ಹೊಡೆದು ಮಿಂಚಿದರು. ನಾಯಕಿ ಪೂಜಾ 45 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‍ನ್ನು ಗೋಲಾಗಿ ಪರಿವರ್ತಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಉಳಿದಂತೆ ತಂಡದ ಆಟಗಾರರುಗಳಾಗಿ ಎಂ. ಪಾರ್ವತಿ, ಕುಮುದಾ, ಎನ್. ನಿವೇದಿತಾ, ಮಲ್ಲಮಾಡ ಲೀಲಾವತಿ, ಎಂ. ಎಸ್. ಕೀರ್ತನಾ, ಕೆ. ಎಸ್. ವಿದ್ಯಾ, ಪಿ. ಎ. ಪವಿತ್ರ, ಪ್ರಿಯಾದರ್ಶಿನಿ, ಸಿ. ಜೆ. ಸಂಗೀತಾ, ಕೆ.ಪಿ. ಮಿಲನಾ, ಆರ್. ಚೆಲುವಾಂಭ, ಪಿ. ಸಿ. ನಿಶಾ, ವ್ಯವಸ್ಥಾಪಕರಾಗಿ ಕಂಬೀರಂಡ ರಾಖಿ ಪೂವಣ್ಣ, ತರಬೇತುದಾರರಾಗಿ ಮೂಕಚಂಡ ನಿರನ್ ನಾಚಪ್ಪ, ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಿಶೋರ್, ಸಹಾಯಕ ನಿರ್ದೇಶಕರಾಗಿ ರಮೇಶ್ ತೊಡಗಿಕೊಂಡಿದ್ದಾರೆ. -ಸುದ್ದಿಪುತ್ರ