ಮಡಿಕೇರಿ, ಡಿ. 26: ಸಂಸ್ಕøತಿ, ಆಚಾರ, ವಿಚಾರಗಳನ್ನು ಪರಿಚಯಿಸುವ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು, ಈ ಮೂಲಕ ವಿಶಿಷ್ಟವಾದ ಕೊಡವ ಆಚಾರ - ವಿಚಾರಗಳನ್ನು ಮುಂದಿನ ಪೀಳಿಗೆ ಯವರೂ ಉಳಿಸಿ ಬೆಳೆಸುವಂತಾಗ ಬೇಕು ಎಂದು ಬಾಟಾ ಸಂಸ್ಥೆಯ ದಕ್ಷಿಣ ವಲಯದ ಪ್ರಾಜೆಕ್ಟ್ ಹೆಡ್ ಜನರಲ್ ಮ್ಯಾನೇಜರ್ ಮಾದೆಯಂಡ ಜಯ ಜೋಯಪ್ಪ ಅವರು ಕರೆ ನೀಡಿದರು.

ಮಡಿಕೇರಿ ಕೊಡವ ಸಮಾಜದಲ್ಲಿ ನಿನ್ನೆ ನಡೆದ ನಗರದ ದೇಚೂರು ಕೊಡವ ಕೇರಿಯ ವಾರ್ಷಿಕ ಮಹಾಸಭೆಯಲ್ಲಿ ಕೇರಿಯ ಸ್ಥಾಪಕ ಸದಸ್ಯರೂ ಆಗಿರುವ ಜಯ ಜೋಯಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಈ ಹಿಂದೆ ಮಡಿಕೇರಿಯಲ್ಲೇ ಬಾಟಾ ಸಂಸ್ಥೆಯ ಉದ್ಯೋಗಿ ಯಾಗಿದ್ದು, ಇದೀಗ ಈ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿರುವ ಅವರು ಕೇರಿಯ ಮಹತ್ವ, ಒಗ್ಗಟ್ಟು ಮತ್ತಿತರ ವಿಚಾರಗಳ ಕುರಿತು ಮಾತನಾಡಿ, ಉತ್ತಮ ಸಂಸ್ಕøತಿಯನ್ನು ಮುಂದುವರಿಸುವ ಕುರಿತು ಒತ್ತಿ ಹೇಳಿದರು.

ಜಿಲ್ಲೆಯಲ್ಲಿ ಇತ್ತೀಚೆಗೆ ಪ್ರಕೃತಿ ವಿಕೋಪ ಉಂಟಾದ ಸಂದರ್ಭ ಸಂಸ್ಥೆಯ ಮೂಲಕ ರೂ. 15 - 30 ಲಕ್ಷದಷ್ಟು ಮೊತ್ತದ ಪಾದರಕ್ಷೆಗಳನ್ನು ಮಂಜೂರು ಮಾಡಿಸಿದ್ದು, ಇದನ್ನು ಸಂಕಷ್ಟಕ್ಕೆ ಒಳಗಾದವರಿಗೆ ತಲಪಿಸಿದ ಕುರಿತು ಕೇರಿಯ ಸದಸ್ಯ ಮಂಡೇಪಂಡ ರತನ್ ಕುಟ್ಟಯ್ಯ ಅವರು ವಿವರಿಸಿದರು.

ದೇಚೂರು ಕೇರಿಯ ಅಧ್ಯಕ್ಷ ಮಾದೆಯಂಡ ರವಿ ಕುಂಞಪ್ಪ ಅವರು ಮಾತನಾಡಿ, ಕೇರಿಯ ಸದಸ್ಯರು ಪರಸ್ಪರ ಪ್ರೀತಿ - ವಿಶ್ವಾಸದೊಂದಿಗೆ ಇರಬೇಕು. ಅಲ್ಲದೆ ಎಲ್ಲರ ಕಷ್ಟ-ಸುಖದಲ್ಲಿ ಭಾಗಿಯಾಗಬೇಕೆಂದು ಹೇಳಿದರು. ಪ್ರಕೃತಿ ವಿಕೋಪದ ಹಿನ್ನೆಲೆ ಈ ಬಾರಿ ಕೇರಿಯ ಇತರ ಚಟುವಟಿಕೆಗಳನ್ನು ರದ್ದು ಮಾಡಿದ ಕುರಿತು ಅವರು ಸಭೆಯ ಗಮನಕ್ಕೆ ತಂದು ಕೇರಿಯ ಹಲವಾರು ಮಂದಿ ತೊಂದರೆಗೊಳಗಾದ ಜನತೆಗೆ ಸಹಕರಿಸಿರುವ ಬಗ್ಗೆ ಮಾಹಿತಿ ನೀಡಿದರು.

ಕೇರಿಯ ಮುಖ್ಯಸ್ಥೆ ಕೊಕ್ಕೇಂಗಡ ಸೌಭಾಗ್ಯ ಪೊನ್ನಪ್ಪ ಅವರು ಸೂಕ್ತ ಸಲಹೆಯಿತ್ತರು. ಮುಖ್ಯಸ್ಥರಾದ ಡಾ. ಕೋದಂಡ ಎಂ. ದೇವಯ್ಯ ಅವರು ಹಾಜರಿದ್ದರು.

ಕಾವೇರಿ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಲಿಯಂಡ ಡೀನಾ ಅಚ್ಚಪ್ಪ ಪ್ರಾರ್ಥಿಸಿ, ಕುಂಞÂೀರ ಕೆ. ಸೋಮಯ್ಯ ಸ್ವಾಗತಿಸಿದರು. ಬೊಳಂದಂಡ ಅಪ್ಪಣ್ಣ ಅತಿಥಿ ಪರಿಚಯಿಸಿ, ಗೌರವ ಕಾರ್ಯದರ್ಶಿ ಮೇವಡ ನಾಣಯ್ಯ ವಂದಿಸಿದರು. ಮಾದೇಟಿರ ಬೆಳ್ಯಪ್ಪ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಆಡಳಿತ ಮಂಡಳಿ ಪ್ರಮುಖರು ಪಾಲ್ಗೊಂಡಿದ್ದರು.