ಮಡಿಕೇರಿ, ಡಿ. 26: ವಿದ್ಯುತ್ ಇಲಾಖೆಯಲ್ಲಿನ (ಸೆಸ್ಕ್) ಪ್ರಗತಿ ಕುರಿತಾಗಿನ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಇಂದು ಇಲ್ಲಿನ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಇರುವ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಸೆಸ್ಕ್ ಮೈಸೂರು ವಿಭಾಗದ ನೂತನ ಸೂಪರಿಟೆಂಡೆಂಟ್ ಇಂಜಿನಿಯರ್ ಆಗಿ ನೇಮಕಗೊಂಡಿ ರುವ ಬಿ.ಎಸ್. ಉಮೇಶ್ ಅವರು ಪ್ರಥಮ ಸಭೆಯನ್ನು ಮಡಿಕೇರಿಯಲ್ಲಿ ಆಯೋಜಿಸಿದ್ದರು. ಪ್ರತಿ ಬಾರಿ ಮೈಸೂರಿನಲ್ಲಿ ಸಭೆ ನಡೆಯುತ್ತಿದ್ದು, ಇಂದು ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಎಲ್ಲ ವಿಭಾಗದ ಸೆಕ್ಷನ್ ಇಂಜಿನಿಯರ್‍ಗಳು ಭಾಗವಹಿಸಿದ್ದರು.

ಸಭೆಯಲ್ಲಿ ಉಮೇಶ್ ಅವರು ಒಂದು ತಿಂಗಳಲ್ಲಾದ ಪ್ರಗತಿ, ವಿದ್ಯುತ್ ಬಿಲ್ ಸಂಗ್ರಹ ಇತ್ಯಾದಿಗಳ ಬಗ್ಗೆ ಪರಿಶೀಲಿಸಿ ಮಾಹಿತಿ ಪಡೆದು ಕೊಂಡರು. ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ವಿಭಾಗದಲ್ಲಿ ವಿದ್ಯುತ್ ಬಿಲ್ ವಸೂಲಾತಿಯಲ್ಲಿ ವಿಳಂಬ ವಾಗಿರುವ ಬಗ್ಗೆ ಅಧಿಕಾರಿಗಳಲ್ಲಿ ಪ್ರಶ್ನಿಸಿದರು. ಮಡಿಕೇರಿ ನಗರಸಭೆಯಿಂದ ಅಧಿಕ ಮೊತ್ತದ ಬಿಲ್ ಬಾಕಿ ಇರುವ ಬಗ್ಗೆ ಪ್ರಶ್ನಿಸಲಾಗಿ ಈ ಬಗ್ಗೆ ನಗರಸಭೆಗೆ ಪತ್ರ ಬರೆಯು ವಂತೆ ಸೂಚಿಸಲಾ ಯಿತು. ಸಭೆಯಲ್ಲಿ ಕಾರ್ಯಪಾಲಕ ಅಭಿಯಂತರ ಸೋಮಶೇಖರ್, ಸಹಾಯಕ ಲೆಕ್ಕಾಧಿಕಾರಿ ಲಿಂಗರಾಜಮ್ಮ ಇದ್ದರು.