ಸೋಮವಾರಪೇಟೆ, ಡಿ. 26: ಸಮೀಪದ ಬಜೆಗುಂಡಿ ಗ್ರಾಮದಲ್ಲಿರುವ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ತಾ. 29 ರಂದು ಮಂಡಲ ಪೂಜೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇವಾಲಯ ಸಮಿತಿಯ ಪ್ರಕಟಣೆ ತಿಳಿಸಿದೆ. ತಾ. 29 ರಂದು ಬೆಳಿಗ್ಗೆ 5 ಗಂಟೆಗೆ ನಡೆ ತೆಗೆಯುವದು, 6 ಗಂಟೆಗೆ ಮಹಾ ಗಣಪತಿ ಹೋಮ, 7 ಗಂಟೆಗೆ ಉಷಾ ಪೂಜೆ, 8 ಗಂಟೆಗೆ ಪುರುಷ ಸೂಕ್ತ ಹೋಮ, 10ಕ್ಕೆ ಕಲಶಾಭಿಷೇಕ, 10.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ, ಸಂಜೆ 6 ಗಂಟೆಗೆ ನಡೆ ತೆಗೆಯುವದು, 6.15ಕ್ಕೆ ದೀಪಾರಾಧನೆ, ಪುಷ್ಪಾಂಜಲಿ ಸಮರ್ಪಣೆ, 7 ಗಂಟೆಗೆ ಮಹಾ ಅರ್ಚನೆ, 7.30ಕ್ಕೆ ಮಹಾ ಮಂಗಳಾರತಿ ಮತ್ತು ಅನ್ನದಾನ ನಡೆಯಲಿದೆ.