ಗೋಣಿಕೊಪ್ಪ ವರದಿ, ಡಿ. 26: ಕಾಲ್ಸ್ ಮೈದಾನದಲ್ಲಿ ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಕಾಲ್ಸ್ ಶಾಲಾ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಸ್ಕೂಲ್ ಟ್ರ್ಯಾಕ್ ಮತ್ತು ಫೀಲ್ಡ್ ಚಾಂಪಿಯನ್‍ಶಿಪ್‍ನಲ್ಲಿ 8 ಬಹುಮಾನ ಪಡೆದ ಕಾಲ್ಸ್‍ನ ಕೆ.ಎನ್. ಪೂವಣ್ಣ 8 ಬಹುಮಾನ ಗೆದ್ದ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದಾನೆ.

14 ವಯೋಮಿತಿಯ ಬಾಲಕರ ವಿಭಾಗದಲ್ಲಿ ಹಾತೂರು ಸರ್ಕಾರಿ ಪ್ರೌಢಶಾಲೆಯ ವೈ.ಆರ್. ಮಣಿ 6 ಪ್ರಶಸ್ತಿ ಗೆದ್ದುಕೊಂಡು ಚಾಂಪಿಯನ್ ಶಿಪ್ ಪಡೆದರು. 16 ವಯೋಮಿತಿಯ ಬಾಲಕ-ಬಾಲಕಿಯರ 4x400 ಮೀಟರ್ ರಿಲೆಯನ್ನು ಕಾಲ್ಸ್ ತಂಡ ಗೆದ್ದುಕೊಂಡಿತು.

12 ವಯೋಮಿತಿ ಬಾಲಕರ 100 ಮೀ. ಓಟದಲ್ಲಿ ಎಸ್. ಭವಿಕ್, ಅಕ್ಷರ್ ಅಚ್ಚಯ್ಯ, ಲೆಮೆನ್ ಕಾಳಯ್ಯ, 200 ಮೀ. ನಲ್ಲಿ ಲೆಮೆನ್ ಕಾಳಯ್ಯ, ಮಜ್ತುಬಾ, ಅನೀಶ್ ಅಯ್ಯಪ್ಪ, ಲಾಂಗ್ ಜಂಪ್‍ನಲ್ಲಿ ಅಕ್ಷಯ್ ಅಚ್ಚಯ್ಯ, ಎಸ್. ಭವಿಕ್, ಲೆಮೆನ್ ಕಾಳಯ್ಯ, ಬಾಲಕಿಯರ 100 ಮೀ.ನಲ್ಲಿ ಐನಿಕಾ ಚೋಂದಮ್ಮ, ಸಿ. ಸಿ. ಕಾವೇರಮ್ಮ, ಪೊನ್ನಮ್ಮ, 200 ಮೀ. ವಿಭಾಗದಲ್ಲಿ ಐನಿಕಾ ಚೋಂದಮ್ಮ, ಭುಮಿಕಾ, ಸಿ.ಟಿ. ಕಾವೇರಮ್ಮ, ಲಾಂಗ್‍ಜಂಪ್‍ನಲ್ಲಿ ಭುಮಿಕಾ, ಕೆ. ಎಸ್. ಶ್ರುಷ್ಮಾ, ಟಿ.ಸಿ. ಅಕ್ಷಿತಾ.

ಚಾಂಪಿಯನ್‍ಗಳು: 12 ವಯೋಮಿತಿಯ ಬಾಲಕರಲ್ಲಿ ತಲಾ 5 ಸ್ಥಾನ ಪಡೆದುಕೊಳ್ಳುವ ಮೂಲಕ ಗೋಣಿಕೊಪ್ಪ ಲಯನ್ಸ್ ಶಾಲೆಯ ಲೆಮೆನ್ ಕಾಳಯ್ಯ, ಕಾಲ್ಸ್ ಶಾಲೆಯ ಅಕ್ಷರ್‍ಅಚ್ಚಯ್ಯ ಹಾಗೂ ಎಸ್. ಭವಿಕ್ ಚಾಂಪಿಯನ್ ಪ್ರಶಸ್ತಿ ಪಡೆದರು. ಬಾಲಕಿಯರಲ್ಲಿ ಅರಮೇರಿ ಎಸ್‍ಎಂಎಸ್ ಶಾಲೆಯ ಐನಿಕಾ 6 ಸ್ಥಾನ ಮೂಲಕ ಚಾಂಪಿಯನ್‍ಶಿಪ್ ಗಿಟ್ಟಿಸಿಕೊಂಡರು.

14 ವಯೋಮಿತಿಯ ಬಾಲಕರ 100 ಮೀ. ನಲ್ಲಿ ವೈ. ಆರ್. ಮಣಿ, ಪಿ.ಎಸ್. ಶ್ರೀನಿಧಿ, ಫಾಹದ್, 200 ಮೀ. ನಲ್ಲಿ ವೈ. ಆರ್. ಮಣಿ, ಶ್ರೀನಿಧಿ, ಹೆಚ್. ಸಿ. ದರ್ಶನ್, 600 ಮೀ. ನಲ್ಲಿ ಕೃತಿನ್, ವೈಮೇಶ್, ಕೆ.ವಿ. ವರ್ಷಿತ್, ಶಾಟ್‍ಪುಟ್‍ನಲ್ಲಿ ಅದೀಶ್, ದಿವಿನ್ ತಿಮ್ಮಯ್ಯ, ಅವಿನ್ ಲೋಬೋ, ಲಾಂಗ್‍ಜಂಪ್‍ನಲ್ಲಿ ಎಂ. ಕೆ. ಅನ್ಷಿದ್, ಟಿ.ಎಸ್. ದರ್ಶನ್, ಕರಣ್ ಅಯ್ಯಪ್ಪ, ಬಾಲಕಿಯರ 100 ಮೀ. ನಲ್ಲಿ ಕೆ.ಟಿ. ನೀತು, ಹೆಚ್. ಸಿ. ನಿರೀಕ್ಷಾ, ಬಿಜಿಲಿ ಮುತ್ತಮ್ಮ, 200 ಮೀ. ನಲ್ಲಿ ಕೆ.ಟಿ. ನೀತು, ಹೆಚ್.ಸಿ. ನಿರೀಕ್ಷಾ, ಶ್ವೇತಾ, 600 ಮೀ. ನಲ್ಲಿ ಶವಿನಿ, ದಿವ್ಯಾ, ಸಿ.ಎಸ್. ಮೋನಿಕಾ, ಶಾಟ್‍ಪುಟ್‍ನಲ್ಲಿ ದೃಷ್ಠಿ ದೇಚಮ್ಮ, ಭುಮಿಕಾ, ಅದಿತಿಶ್ರೀ, ಲಾಂಗ್‍ಜಂಪ್ ನಲ್ಲಿ ಬಿ.ಪಿ. ಶಿವಾಲಿ, ಕೀರ್ತನ್ ಕಾವೇರಮ್ಮ, ಕಾಂಚನ್ ಕಮಲಾಕ್ಷಿ.

ಚಾಂಪಿಯನ್‍ಗಳು: 14 ವಯೋಮಿತಿಯ ಬಾಲಕರ ವಿಭಾಗದಲ್ಲಿ ಹಾತೂರು ಸರ್ಕಾರಿ ಪ್ರೌಢಶಾಲೆಯ ವೈ. ಆರ್. ಮಣಿ 6 ಸ್ಥಾನ, ಬಾಲಕಿಯರಲ್ಲಿ ಮಡಿಕೇರಿ ಭಾರತೀಯ ಕೊಡಗು ವಿದ್ಯಾಲಯ ಶಾಲೆಯ ಕೆ.ಟಿ. ನೀತು 6 ಸ್ಥಾನ ಗೆದ್ದುಕೊಂಡು ಚಾಂಪಿಯನ್ ಪಟ್ಟ ಅಲಂಕರಿಸಿದರು.

16 ವಯೋಮಿತಿಯ ಬಾಲಕರ 100 ಮೀ. ನಲ್ಲಿ ವೈ.ಕೆ. ಗಣೇಶ್, ಎಂ. ದರ್ಶನ್, ಎ. ಆದೇಶ್, 200 ಮೀ. ವೈ.ಕೆ. ಗಣೇಶ್, ಕೆ.ಎನ್. ಪೂವಣ್ಣ, ಎಂ. ದರ್ಶನ್, 400 ಮೀ. ನಲ್ಲಿ ಕೆ.ಎನ್. ಪೂವಣ್ಣ, ಶಶಿಕುಮಾರ್, ಉತ್ತಪ್ಪ, 800 ಮೀ. ನಲ್ಲಿ ಲೌಖಿಕ್ ಅಯ್ಯಪ್ಪ, ಆರ್. ಎಂ. ನಿಕ್ಷಿತ್, ಪ್ರತ್ಯು, 1500 ಮೀ. ನಲ್ಲಿ ಆರ್.ಎಂ. ನಿಕ್ಷಿತ್, ಆರ್. ಮಹೇಶ್, ಪಿ. ಹೆಚ್. ಆಶಿಯಂ, ಶಾಟ್‍ಪುಟ್‍ನಲ್ಲಿ ಮಿಲನ್ ಮುತ್ತಣ್ಣ, ಭುವನ್ ಬೋಪಣ್ಣ, ಅಧ್ವಿತ್, ಡಿಸ್ಕಸ್‍ನಲ್ಲಿ ಮಿಲನ್ ಮುತ್ತಣ್ಣ, ಎಸ್. ಬಿ. ಅಧ್ವೈತ್, ಭುವನ್ ಬೋಪಣ್ಣ, ಲಾಂಗ್ ಜಂಪ್‍ನಲ್ಲಿ ಕೆ. ಎನ್. ಪೂವಣ್ಣ, ಲೋಹಿತ್ ಬಸಪ್ಪ, ಕೆ.ಪಿ. ಸೋಮಯ್ಯ, ಬಾಲಕಿಯರ 100 ಮೀ. ನಲ್ಲಿ ಸಿಮ್ಷಾ ಗಣಪತಿ, ಸಿ.ಪಿ. ಸಹಾನ, ಕೆ.ವೈ. ನಯನ, 200 ಮೀ. ನಲ್ಲಿ ಸಿಮ್ಷಾ ಗಣಪತಿ, ಶ್ರೇಷ್ಠ ನಾಚಪ್ಪ, ಹೆಚ್. ಜಿ. ಭುಮಿಕಾ, 400 ಮೀ. ನಲ್ಲಿ ಸಿ.ಪಿ. ಸಹನಾ, ನಯನಶ್ರೀ, ಐಶ್ವರ್ಯ, 800 ಮೀ.ನಲ್ಲಿ ಕೆ. ಸಿ. ಸೀತಮ್ಮ, ಸಿ.ಎನ್. ಚೈತ್ರಾ, ಸಿ. ಪ್ರೀತಿ, ಶಾಟ್‍ಪುಟ್‍ನಲ್ಲಿ ನಿರಲ್ ಬಾಬಿ, ಕೆ.ಪಿ.ಪುಷ್ಯಾ, ಜಿ.ಎಲ್. ಚಂದನ, ಡಿಸ್ಕಸ್‍ನಲ್ಲಿ ನಿರಲ್ ಬಾಬಿ, ಇಶ್ರಾ ಜೈನ್, ಹೆಚ್. ಎಸ್. ದಿವ್ಯಾ, ಲಾಂಗ್‍ಜಂಪ್‍ನಲ್ಲಿ ಎಂ.ಡಿ. ಯಾನಾ, ಟಿ.ಎಸ್. ಪ್ರಿಯಾ, ಟಿ. ಭದ್ರ ಪಡೆದುಕೊಂಡರು.

ಚಾಂಪಿಯನ್‍ಗಳು: 16 ವಯೋಮಿತಿಯ ಬಾಲಕರಲ್ಲಿ ಕಾಲ್ಸ್‍ನ ಕೆ. ಎನ್. ಪೂವಣ್ಣ 8 ಸ್ಥಾನ, ಬಾಲಕಿಯರಲ್ಲಿ ವೀರಾಜಪೇಟೆ ಸೆಂಟ್ ಆನ್ಸ್ ಶಾಲೆಯ ನಿರಲ್ ಬಾಬಿ ಹಾಗೂ ಕಾಲ್ಸ್ ಶಾಲೆಯ ಸಿಮ್ಷಾ ಗಣಪತಿ ತಲಾ 6 ಸ್ಥಾನ ಗೆದ್ದುಕೊಂಡು ಚಾಂಪಿಯನ್ ಪಟ್ಟ ದಕ್ಕಿಸಿಕೊಂಡರು.

ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ಮುಖ್ಯಸ್ಥೆ ಅಶ್ವಿನಿ ನಾಚಪ್ಪ, ಕಾಲ್ಸ್ ಮುಖ್ಯಸ್ಥ ದತ್ತಾ ಕರುಂಬಯ್ಯ, ಪ್ರಾಂಶುಪಾಲ ಬಾಚೇಟೀರ ಗೌರಮ್ಮ ನಂಜಪ್ಪ ಬಹುಮಾನ ವಿತರಿಸಿದರು. ಗೋಣಿಕೊಪ್ಪ ಲಯನ್ಸ್, ಮೂರ್ನಾಡ್ ಹೈಸ್ಕೂಲ್, ಅಮ್ಮತ್ತಿ ನೇತಾಜಿ, ಪೊನ್ನಂಪೇಟೆ ಸಾಯಿಶಂಕರ್, ಹಾತೂರು ಪ್ರೌಢಶಾಲೆ, ಅರಮೇರಿ ಎಸ್.ಎಂ.ಎಸ್, ಪೊನ್ನಂಪೇಟೆ ಸರ್ಕಾರಿ ಪ್ರೌಢ, ಗೋಣಿಕೊಪ್ಪ ಪ್ರೌಢಶಾಲೆ, ಕಡಂಗ ವಿಜಯ ಪ್ರೌಢಶಾಲೆ, ಗೋಣಿಕೊಪ್ಪ ಕಾಲ್ಸ್, ಮೂರ್ನಾಡ್ ಜೆಜೆಇಎಸ್, ಮೂರ್ನಾಡ್ ಮಾರುತಿ ಶಾಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

- ಸುದ್ದಿಪುತ್ರ