ವೀರಾಜಪೇಟೆ, ಡಿ. 26: ವೀರಾಜಪೇಟೆಯ ಸುಭಾಶ್ ನಗರದಲ್ಲಿ ಅಬೂಬಕರ್ ಎಂಬವರ ಮನೆಯಲ್ಲಿ ರೂ 45000 ಮೌಲ್ಯದ ಎರಡು ಚಿನ್ನದ ಬಳೆಗಳನ್ನು ಕಳವು ಮಾಡಿರುವದಾಗಿ ನಗರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಕಳವು ಪ್ರಕರಣ ದಾಖಲಿಸಿದ್ದಾರೆ.ತಾ. 22ರಂದು ಕೆಲಸದ ನಿಮಿತ್ತ ಅಬೂಬಕರ್ ಕುಟುಂಬದವರು ಮೈಸೂರಿಗೆ ತೆರಳಿ ನಿನ್ನೆ ದಿನ ಹಿಂತಿರುಗಿ ಬಂದು ನೋಡಿದಾಗ ಚಿನ್ನಾಭರಣ ಕಳವು ಆಗಿರುವದು ಪತ್ತೆಯಾಗಿದೆ. ಪೊಲೀಸರು ಸ್ಥಳದ ಮಹಜರು ನಡೆಸಿ ಮಡಿಕೇರಿಯಿಂದ ಶ್ವಾನ ದಳವನ್ನು ಕರೆಸಿ ಪರಿಶೀಲಿಸಿದರು.