ಸುಂಟಿಕೊಪ್ಪ, ಡಿ.25: ತಾಲೂಕು ಪಂಚಾಯಿತಿ ಅನುದಾನದಲ್ಲಿ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3.94 ಲಕ್ಷ ವೆಚ್ಚದ ಕಾಮಗಾರಿಗಳಿಗೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಭೂಮಿ ಪೂಜೆ ನೆರವೇರಿಸಿದರು.

ಕೆದಕಲ್ ಗ್ರಾ.ಪಂ.ನ ವಿಕ್ರಮ್ ಬಡಾವಣೆಯ ಸತೀಶ ಅವರ ಮನೆ ಕಡೆಯಿಂದ ಅಣ್ಣು ಮನೆಯವರೆಗೆ ರೂ. 1 ಲಕ್ಷ 10 ಸಾವಿರ ವೆಚ್ಚದ ಚರಂಡಿ ಕಾಮಗಾರಿ, ಹೊನ್ನಪ್ಪ ಅವರ ಮನೆಯ ತಡೆಗೋಡೆಗೆ ರೂ. 70,000 ಕೆದಕಲ್ ಅಂಗನವಾಡಿ ಶೌಚಾಲಯಕ್ಕೆ ರೂ. 10,000 ಕೆದಕಲ್‍ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ ಬಣ್ಣ ಬಳಿಯಲು ರೂ. 94,000 ಮೊದೂರು ಅಂಗನವಾಡಿ ಶೌಚಾಲಯಕ್ಕೆ ರೂ. 10,000 ಕಾಂಡನಕೊಲ್ಲಿ ಕಾಲೋನಿಯ ಚರಂಡಿ ನಿರ್ಮಾಣಕ್ಕೆ ರೂ. 1 ಲಕ್ಷ ಗಳನ್ನು ಮೀಸಲಿಡಲಾಗಿದೆ ಮುಂದಿನ ವಾರದಿಂದ ಕೆಲಸ ಆರಂಭವಾಗಲಿದೆ ಎಂದು ಅವರು ಹೇಳಿದರು.

ಪಕೃತಿ ವಿಕೋಪದಿಂದ ಕೆದಕಲ್ ವಿಭಾಗದಲ್ಲಿ ಆನೇಕ ಮನೆಗಳಿಗೆ ಹಾನಿಯಾಗಿದೆ. ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂದಿಸಿಲ್ಲ.

ಸ್ಥಳೀಯ ನಾಗರಿಕರಾದ ಹೊನ್ನಪ್ಪ, ಸುಶೀಲ, ಡಿಸೋಜ ಮೊದಲಾದವರು ಅಳಲು ತೋಡಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಮಣಿಉತ್ತಪ್ಪ ತನಗೆ ಮಾಹಿತಿ ಲಭಿಸದ ಕಾರಣ ಬರಲಾಗಲಿಲ್ಲ ಎಂದರು.