ಮಡಿಕೇರಿ, ಡಿ. 26: ಬೆಂಗಳೂರಿನಲ್ಲಿ ತಾ. 29, 30, 31 ರಂದು ವಿಶ್ವ ಹವ್ಯಕ ಸಮ್ಮೇಳನವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಿ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಭಾಗವಹಿಸಿ, ವಿಜಯಗಳಿಸಲು ಹೋರಾಡಿದ ನಿವೃತ್ತ ಯೋಧ ಕಿಗ್ಗಾಲು ಗಿರೀಶ್ ಅವರ ಸೇವೆಯನ್ನು ಸ್ಮರಿಸಿ, ತಾ. 30 ರಂದು ಹವ್ಯಕ ಯೋಧರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವದೆಂದು ಹವ್ಯಕದ ಪ್ರಕಟಣೆ ತಿಳಿಸಿದೆ.