ಶ್ರೀಮಂಗಲ, ಡಿ. 25: ಯುನೈಟೆಡ್ ಕೊಡವ ಅರ್ಗನೈಸೇಷನ್ (ಯುಕೊ) ಸಂಘಟನೆಯ ಆಶ್ರಯದಲ್ಲಿ ಜಾಗೃತಿಕ ಕೊಡವ ಸಾಂಸ್ಕøತಿಕ ಸಮ್ಮಿಲನವಾದ 5ನೇ ವರ್ಷದ ಕೊಡವ ಮಂದ್ ನಮ್ಮೆ ಕಾರ್ಯಕ್ರಮ ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ಸಾಂಸ್ಕøತಿಕ ಕಲರವದೊಂದಿಗೆ ಸಂಭ್ರಮದಲ್ಲಿ ನಡೆಯಿತು.
ಪೂರ್ವಾಹ್ನ ಇಲ್ಲಿನ ಕೊಡವ ಸಮಾಜದಿಂದ ಸಾಂಸ್ಕøತಿಕ ಮೆರವಣಿಗೆ ಆರಂಭಗೊಂಡು ಪೊನ್ನಂಪೇಟೆ ಪಟ್ಟಣದ ಮುಖ್ಯ ಬೀದಿ, ಬಸ್ ನಿಲ್ದಾಣದ ಮೂಲಕ ಸಾಯಿ ಶಂಕರ ಶಾಲೆಯವರೆಗೆ ನಡೆಯಿತು. ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮೆರವಣಿಗೆಯಲ್ಲಿ ಕೊಡವರು ತಮ್ಮ ಮಕ್ಕಳೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕೋವಿ ಸಹಿತ ಪಾಲ್ಗೊಂಡಿದ್ದರು. ಬಸ್ ನಿಲ್ದಾಣದಲ್ಲಿ 5ನೇ ವರ್ಷದ ಮಂದ್ ನಮ್ಮೆ ಪ್ರಯುಕ್ತ 5 ಸುತ್ತು ಗುಂಡು ಹಾರಿಸಿ, ನಂತರ ಕೊಡವ ವಾಲಗತ್ತಾಟ್ಗೆ ಕುಣಿದು ಸಂಭ್ರಮಿಸುವÀ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕಾಪಳಕಳಿ, ವಿವಿಧ ಮಂದ್ಗಳ ಬ್ಯಾನರ್ ಸಹಿತ ಕಲವಿದರು ಆಗಮಿಸಿದ್ದರು. ಸಾಯಿಶಂಕರ ವಿದ್ಯಾಸಂಸ್ಥೆ ಪ್ರವೇಶಿಸುತ್ತಿದ್ದಂತೆ ಯುಕೊ ಸಂಘಟನೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ತಕ್ಕಮುಖ್ಯಸ್ಥರು ಆಗಮಿಸಿದ ಮಂದ್ಗಳಿಗೆ ಸಾಂಪ್ರದಾಯಿಕ ಮಂದ್ ಮಾರ್ಯಾದಿಯನ್ನು ನೀಡಿದರು.
ಸಭಾ ಕಾರ್ಯಕ್ರಮದ ಆರಂಭದಲ್ಲಿ ಕೊಡಗಿನ ಪ್ರಾಕೃತಿಕ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ನಂತರ 5 ಗ್ರಾಮದ ಕ್ರ್ನಾಲ್ ನಾಡ್ ತಕ್ಕರಾದ ಚೆಪ್ಪುಡಿರ ಪೊನ್ನಪ್ಪ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಕೊಂಡೀರ ನಾಣಯ್ಯ ಗಾಳಿಯಲ್ಲಿ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಪುತ್ತರಿ ಕೋಲಾಟ್ ಆಡುವ ಮೂಲಕ ನಾಡು ತಕ್ಕರಾದ ಚೆಪ್ಪುಡಿರ ಪೊನ್ನಪ್ಪ, ಉಮ್ಮತ್ತಾಟಕ್ಕೆ ಹೆಜ್ಜೆ ಹಾಕುವ ಮೂಲಕ ಸ್ರ್ತೀರೋಗ ತಜ್ಞೆ ಡಾ. ಅಪ್ಪಂಡೇರಂಡ ಸೋನಿಯ ಮಂದಪ್ಪ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಮುಖ್ಯ ಅತಿಥಿ ಡಾ. ಸೋನಿಯ ಮಂದಪ್ಪ ಅವರು ಕೊಡವ ಸಂಸ್ಕøತಿಯ ಬಗ್ಗೆ ಅಭಿಮಾನ ಮೂಡಿಸಲು ಶಾಲಾ ಕಾಲೇಜಿನ ಅವಧಿಯಲ್ಲಿಯೇ ಕಾರ್ಯಕ್ರಮ ನಡೆಸಬೇಕು. ಇದಕ್ಕಾಗಿ ಕೊಡವ ಸಮಾಜ ವೇದಿಕೆ ನೀಡಬೇಕು ಎಂದರು.
ದೆಹಲಿ ಕೊಡವ ಸಮಾಜದ ಅಧ್ಯಕ್ಷ ಮಾಚಿಮಂಡ ತಮ್ಮು ಕಾರ್ಯಪ್ಪ ಮಾತನಾಡಿ ಈ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರೂ ತನ್ನದೇ ಆದ ವ್ಯಕ್ತಿತ್ವ ಹಾಗೂ ನಡತೆ ಹೊಂದಿದ್ದಾರೆ. ಅದನ್ನು ಕಾಪಾಡಿಕೊಂಡು ಹೋಗುವಂತೆ ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುಕೊ ಸಂಘಟನೆಯ ಮುಖಂಡ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಅವರು ಮುಂದಿನ ಒಂದೆರಡು ವರ್ಷದಲ್ಲಿ ಯುಕೊ ಕೊಡವ ಮಂದ್ ನಮ್ಮೆಗೆ ಸ್ವಂತ ಜಾಗವನ್ನು ಹೊಂದಿಕೊಳ್ಳುವ ಅಭಿಲಾಷೆಯನ್ನು ವ್ಯಕ್ತಪಡಿಸಿ 2020ರ ಮಂದ್ ನಮ್ಮೆಯನ್ನು ಸ್ವಂತ ಜಾಗದಲ್ಲಿಯೇ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.
ಅಸೀಮಾ ಪತ್ರಿಕೆಯ ಸಂಪಾದಕ ಮಾಣಿಪಂಡ ಸಂತೋಷ್ ತಮ್ಮಯ್ಯ ಮಾತನಾಡಿ ಮಂದ್ನ ಬಗ್ಗೆ ಕೊಡವರು ಅರಿತುಕೊಳ್ಳಬೇಕು. ಮಂದ್ ಕೇವಲ ಕಂಡಷ್ಟು ಅಲ್ಲ. ಮಂದ್ನಲ್ಲಿ ಸಾಹಿತ್ಯವಿದೆ, ವೈಚಾರಿಕತೆ ಇದೆ, ಸಂಸ್ಕøತಿ, ವೀರತ್ವ, ಧಾರ್ಮಿಕತೆ ಎಲ್ಲವೂ ಇದೆ. ಮಂದ್ ಅರಿತರೆ ಕೊಡಗಿನ ಎಲ್ಲವನ್ನು ಅರಿತಂತೆ. ಮಂದ್ನ ಜೊತೆ ಒಡನಾಟ ಹೊಂದಿದ ವ್ಯಕ್ತಿ ಪರಿಪೂರ್ಣತೆ ಸಾಧಿಸಲು ಸಾಧ್ಯ. ಆದ್ದರಿಂದ ಬಿಟ್ಟುಹೋಗಿರುವ ಮಂದ್ಗಳ ಆಚರಣೆ ಹಿನ್ನೆಲೆಯಲ್ಲಿ ಮಂದ್ಗೆ ಮರಳಿ ಬನ್ನಿ ಎಂಬ ಘೋಷವಾಕ್ಯದೊಂದಿಗೆ ಮಂದ್ಗಳಿಗೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.
ವೇದಿಕೆಯಲ್ಲಿ ಕೊಂಡಿರ ನಾಣಯ್ಯ, ದಮಯಂತಿ ನಾಣಯ್ಯ, ಕೊಂಡಿರ ಪ್ರಥ್ವಿ ಮುತ್ತಣ್ಣ, ಡಾ.ಕಾಳಿಮಾಡ ಶಿವಪ್ಪ,
(ಮೊದಲ ಪುಟದಿಂದ) ಗ್ರಾಮದ ತಕ್ಕರಾದ ಕಿರುಗೂರಿನ ಚೆಪ್ಪುಡಿರ ರಾಜೇಶ್ ಉತ್ತಪ್ಪ, ಮತ್ತೂರುವಿನ ಚೀರಂಡ ನಾಚಪ್ಪ, ಕೋಟೂರುವಿನ ಪೆಮ್ಮಂಡ ಅಪ್ಪಯ್ಯ, ನಲ್ಲೂರುವಿನ ಪುಚ್ಚಿಮಾಡ ವಸಂತ್ ತಿಮ್ಮಯ್ಯ, ಯುಕೊ ಸಂಘಟನೆಯ ಮುಖಂಡರಾದ ನಂದೇಟಿರ ರವಿ ಸುಬ್ಬಯ್ಯ, ಕೇಚಟ್ಟಿರ ರ್ಯಾಲಿ ಬಿದ್ದಪ್ಪ, ಮಚ್ಚಮಾಡ ಅನೀಶ್ ಮಾದಪ್ಪ, ಮಾದೇಟಿರ ತಿಮ್ಮಯ್ಯ, ನೆಲ್ಲಮಕ್ಕಡ ರದಣು, ತೀತಿಮಾಡ ಬೋಸ್ ಅಯ್ಯಪ್ಪ ಹಾಜರಿದ್ದರು. ಯುಕೋ ಸಂಚಾಲಕ ಮಂಜು ಚಿಣ್ಣಪ್ಪ ಸ್ವಾಗತಿಸಿ, ಲೋಹಿತ್ ಭೀಮಯ್ಯ ಪ್ರಾರ್ಥಿಸಿ ವಂದಿಸಿದರು.
ಸಂಸ್ಕøತಿಯನ್ನು ಉಳಿಸಿಕೊಳ್ಳಲು ಕರೆ
ನಮ್ಮ ಪೂರ್ವಜರು ನಮಗೆ ದಕ್ಕಿಸಿಕೊಟ್ಟಿರುವ ಸಂಸ್ಕøತಿಯಿಂದ ನಮಗೆ ಗೌರವ ಸಿಗುತ್ತಿದೆ. ಅಂತಹ ಬೇರನ್ನು ಗಟ್ಟಿ ಮಾಡಬೇಕಾಗಿದೆ. ಇದನ್ನು ಉಳಿಸಿಕೊಳ್ಳಲು ಮಂದ್ನಂತಹ ಕಾರ್ಯಕ್ರಮಕ್ಕೆ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಯುಕೊ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಪ್ರತಿಪಾದಿಸಿದರು.
ಮಂದ್ ನಮ್ಮೆಯ ಸಭಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಕೊಡವರು ವೈಯಕ್ತಿಕವಾಗಿ ತಮ್ಮ ಮನೆಯ ಸುತ್ತಲೂ ಕಾಂಪೌಂಡ್, ಸಿಸಿ ಟಿವಿ, ಭದ್ರತಾ ಸಿಬ್ಬಂದಿಗಳನ್ನು ನೇಮಿಸಿಕೊಂಡು ಸುರಕ್ಷಿತವಾಗಿದ್ದೇವೆ ಎಂದುಕೊಂಡರೂ, ಹೊರಗೆ ಬಂದಾಗ ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ. ಎಂದು ಮನವರಿಕೆಯಾಗುತ್ತದೆ. ನಾವು ಸಂಸ್ಕøತಿಯನ್ನು ಬಿಟ್ಟು ಹಣ ಗಳಿಸುವ ಏಕೈಕ ಉದ್ದೇಶಕ್ಕೆ ಪ್ರಾಮುಖ್ಯತೆ ನೀಡುವದು ಬೇಡ. ನಾವು ಗಟ್ಟಿಯಾಗಿ ಉಳಿಯಬೇಕಾದರೆ ಆಸೆಗಳನ್ನು ಸೀಮಿತವಾಗಿಟ್ಟುಕೊಂಡು ನೆಮ್ಮದಿಗಾಗಿ ಸಂಸ್ಕøತಿಯನ್ನು ಬೇರು ಮಟ್ಟದಿಂದ ಬೆಳೆಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಇರುವದನ್ನೆಲ್ಲ ಕಳೆದುಕೊಳ್ಳುತ್ತಾ ಹೋಗುತ್ತೇವೆಂದು ಎಚ್ಚರಿಸಿದರು.
ನಮ್ಮ ಸಂಘಟನೆಗೆ ಹಲವರು ಅಡೆತಡೆಗಳನ್ನು ಮಾಡುತ್ತಾ ಬಂದಿದ್ದಾರೆ. ತೊಂದರೆ ಮಾಡಲು ಪ್ರಯತ್ನ ಪಟ್ಟಷ್ಟು ನಾವು ಮತ್ತಷ್ಟು ಗಟ್ಟಿಯಾಗುತ್ತೇವೆ. ಏನೇ ತೊಂದರೆ ಮಾಡಿದರೂ ಕೊಡವಾಮೆಯ ಘತವೈಭವವನ್ನು ಪ್ರತಿಷ್ಠಾಪನೆ ಮಾಡಿ ನಾವು ಈ ಮಣ್ಣಿನಿಂದ ಮರೆಯಾಗುತ್ತೇವೆಂದು ಪುನರುಚ್ಚರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಅಂತರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ ಕೊಡವಾಮೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮವನ್ನು ಮಂಜು ಚಿಣ್ಣಪ್ಪ ನೇತೃತ್ವದ ತಂಡ ನಡೆಸುತ್ತಿರುವದು ಶ್ಲಾಘನೀಯ. ಕೊಡವರಲ್ಲಿ ಸಾಂಸ್ಕøತಿಕ ಒಗ್ಗಟ್ಟು ಹಬ್ಬಗಳಿಂದ ಬೆಸೆಯುತ್ತಿವೆ. ಇತ್ತೀಚೆಗೆ ಅಂತರ್ಜಾತಿ ವಿವಾಹದಿಂದ ಕೊಡವಾಮೆಗೆ ಧಕ್ಕೆಯಾಗುತ್ತಿದೆ. ಕೊಡವಾಮೆ ಮಾತ್ರವಲ್ಲ ಕೊಡಗನ್ನು ಸಹ ಉಳಿಸಲು ಯುಕೊ ಸಂಘಟನೆ ಕೆಲಸ ಮಾಡುತ್ತಿದೆ. ಯಾವದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಕೊಡಗು-ಕೊಡವರನ್ನು ಕಡೆಗಣಿಸುತ್ತಿದೆ. ಆದ್ದರಿಂದ ಇಂತಹ ಸಂಘಟನೆಗಳು ಸರಕಾರದ ಕಿವಿ ಹಿಂಡುವ ಕೆಲಸ ಮಾಡಬೇಕಾಗಿದೆ.
ಕೊಡಗಿನಲ್ಲಿ ಉಂಟಾಗಿರುವ ಪ್ರಾಕೃತಿಕ ದುರಂತದಲ್ಲಿ ಸಂತ್ರಸ್ತರಾದ ವರಿಗೆ ತೃಪ್ತಿದಾಯಕವಾದ ಪುನರ್ ವಸತಿ ಕಾರ್ಯ ಆಗುತ್ತಿಲ್ಲ. ನಾವು ನೀಡಿದ ಸಲಹೆಗಳಿಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ. ಸಂತ್ರಸ್ತರಿಗೆ ನ್ಯಾಯಯುತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯುಕೊ ಸಂಘಟನೆ ಕಾರ್ಯೋನ್ಮುಖವಾಗಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾದ ಪೊನ್ನಂ ಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಕೊಳೇರ ಝರು ಗಣಪತಿ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ತಮ್ಮ ವಿದ್ಯಾಸಂಸ್ಥೆಯು ವೇಳಾಪಟ್ಟಿಯಲ್ಲಿ ಒಂದು ಅವಧಿಯನ್ನು ಕೊಡವ ಸಂಸ್ಕøತಿಯ ಕಲಿಕೆಗೆ ಮೀಸಲಿಡುವದುದಾಗಿ ಭರವಸೆ ನೀಡಿದರು.