ಗೋಣಿಕೊಪ್ಪಲು, ಡಿ. 25: ಇತರ ಪ್ರತಿಭಾವಂತ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ಅವರನ್ನು ಕಡೆಗಣಿಸುವ ಅಥವಾ ಹೀಯಾಳಿಸುವ ಪ್ರವೃತಿಯನ್ನು ಪೋಷಕರು ಮಾಡಬಾರದು ಅದರಿಂದ ಮಕ್ಕಳ ಶೈಕ್ಷಣಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು. ಸಂತ ಥಾಮಸ್ ಶಾಲೆಯ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಪಾಠ ಪ್ರವಚನಗಳ ಬಗ್ಗೆ ಪೋಷಕರು ಆಸ್ಥೆವಹಿಸಿ ಅವರ ಬೆಳವಣಿಗೆ ಗಮನಿಸಿ ಶಾಲಾ ಅಧ್ಯಾಪಕರನ್ನು ಕಂಡು ಮಕ್ಕಳ ಕಲಿಕೆಯ ಕುರಿತು ಚರ್ಚಿಸಿದಾಗ ಮಾತ್ರ ಆ ವಿದ್ಯಾರ್ಥಿಯ ಶೈಕಣಿಕ ಬೆಳವಣಿಗೆ ಸಾಧ್ಯ ಎಂದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಎಂ.ಪಿ ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, 49 ವರ್ಷಗಳ ಹಿಂದೆ ನರ್ಸರಿ ಶಾಲೆಯೊಂದಿಗೆ ಪ್ರಾರಂಭಗೊಂಡ ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪವಾಗಿ ಪ್ರಬುದ್ಧ ನಾಗರಿಕರನ್ನು ಲೋಕಕ್ಕೆ ನೀಡಿದೆ ಎಂದರು. ಈಗಾಗಲೆ ಶಾಲೆಯ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಲಾಗಿದ್ದು ಮುಂದಿನ ವರ್ಷ 50ನೇ ವರ್ಷದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವದು ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗೋಣಿಕೊಪ್ಪಲು ಕ್ಲಸ್ಟರ್ನ ಸಿ ಆರ್ ಪಿ. ಜ್ಯೋತೀಶ್ವರಿ ಮಾತನಾಡಿ, ಶಾಲೆಯು ಶೈಕಣಿಕವಾಗಿ ಆಟೋಟ ಮತ್ತು ಸಾಂಸ್ಕøತಿಕವಾಗಿ ಉತ್ತಮ ಅಭಿವೃದ್ಧಿ ಹೊಂದಿದೆ ಎಂದರು.
ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಮ್ಮಡ ಸೋಮಣ್ಣ , ಧನಲಕ್ಷ್ಮಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಕುಲ್ಲಚಂಡ ಪ್ರಮೋದ್ ಗಣಪತಿ, ಪಿ.ಕೆ ಪ್ರವೀಣ್, ಎ.ಜಿ.ಬಾಬು, ವಿಲ್ಸನ್, ಪ್ರಭಾವತಿ, ಸಮ್ಮದ್ ಶಾಲೆಯ ವ್ಯವಸ್ಥಾಪಕ ರೆ. ಫಾ. ಆಂಟನಿ ಉಪಸ್ಥಿತರಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಶಾಲೆಯ ಪ್ರಾಂಶುಪಾಲ ರೆ. ಫಾ. ಪಿ.ಕೆ ಜಾರ್ಜ್ ವಾರ್ಷಿಕ ವರದಿ ಮಂಡಿಸಿದರು. ಕಾರ್ಯಕ್ರಮ ಆಧ್ಯಕ್ಷತೆ ವಹಿಸಿದ ಶಾಲೆಯ ಪ್ರಧಾನ ವ್ಯವಸ್ಥಾಪಕ ರೆ. ಫಾ. ಅಲೆಕ್ಸ್ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ವಿಲ್ಸನ್ ವಂದಿಸಿರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.