ಮಡಿಕೇರಿ, ಡಿ. 25: ವೀರಾಜಪೇಟೆ ತಾಲೂಕು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಘದ ನೂತನ ಅಧ್ಯಕ್ಷರಾಗಿ ಬಿ.ಬಿ. ಸಂಪತ್ ಹಾಗೂ ಕಾರ್ಯದರ್ಶಿಯಾಗಿ ಎಂ.ಎಂ. ಶಫೀಕ್ ಆಯ್ಕೆ ಯಾಗಿದ್ದಾರೆ ಎಂದು ಜಿಲ್ಲಾ ರಿಯಲ್ ಎಸ್ಟೇಟ್ ಬಿಸಿನೆಸ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ ತಿಳಿಸಿದ್ದಾರೆ.

ವೀರಾಜಪೇಟೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಬಲವರ್ಧನೆಯ ಹಿನ್ನೆಲೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಉಪಾಧ್ಯಕ್ಷರಾಗಿ ಕೆ. ಪಳನಿ ಪ್ರಕಾಶ್, ಉಪಕಾರ್ಯದರ್ಶಿಯಾಗಿ ಎಂ.ಎ. ಅಲ್ತಾಫ್ ಅಹಮ್ಮದ್, ಖಜಾಂಚಿ ಅನಿಲ್ ಸೀನಪ್ಪ, ಕಾನೂನು ಸಲಹೆಗಾರರಾಗಿ ವಕೀಲ ವಿ.ಪಿ. ರಮೇಶ್, ಗೌರವ ಅಧ್ಯಕ್ಷರಾಗಿ ವಿ.ಜಿ. ಮನೋಹರ್ ಆಯ್ಕೆ ಯಾದರು.

ಈ ಸಂದರ್ಭ ಅಸೋಸಿ ಯೇಷನ್‍ನ ಜಿಲ್ಲಾ ಉಪಾಧ್ಯಕ್ಷ ಮುಬಿನ್ ಅಹಮ್ಮದ್, ಸಂಘಟನಾ ಕಾರ್ಯದರ್ಶಿ ಎನ್.ಡಿ. ಕುಶಾಲಪ್ಪ, ಖಜಾಂಚಿ ಜಾನ್ಸ್‍ನ್‍ಪಿಂಟೊ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಿ.ಎಸ್. ಸದಾಶಿವರೈ, ಉಪಾಧ್ಯಕ್ಷ ಜೈವಿರ ಪದ್ಮನಾಭ್, ನಿರ್ದೇಶಕ ಎಂ.ಇ. ಉಸ್ಮಾನ್ ಮತ್ತಿತರರು ಹಾಜರಿದ್ದರು.