ಕುಶಾಲನಗರ, ಡಿ. 25: ಕುಶಾಲನಗರ ಹಾರಂಗಿ ರಸ್ತೆಯ ಸಮೀಪದ ವಾಲ್ಮೀಕಿ ಭವನ ಬಳಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ ಶೆಡ್ ಅನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ತೆರವು ಮಾಡುವ ಕಾರ್ಯಾಚರಣೆ ನಡೆಸಿದರು. ಮುಳ್ಳಸೋಗೆ ಗ್ರಾಮದ ಸರ್ವೇ ನಂ. 5/1 ರಲ್ಲಿ ಮಹಿಳೆಯರೊಬ್ಬರು ಅಕ್ರಮವಾಗಿ ಶೆಡ್ ನಿರ್ಮಿಸಿದ್ದು ಪೋಲಿಸ್ ಸಹಾಯದಿಂದ ಶೆಡ್ ತೆರವುಗೊಳಿಸುವ ಕಾರ್ಯ ನಡೆಸಲಾಯಿತು ಎಂದು ಸೋಮವಾರಪೇಟೆ ತಹಶೀಲ್ದಾರ್ ಮಹೇಶ್ ತಿಳಿಸಿದರು.