ಗೋಣಿಕೊಪ್ಪ ವರದಿ, ಡಿ. 23: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಹಾಕಿ ಮೈಸೂರು ಸಹಯೋಗದಲ್ಲಿ ನಡೆದ ರಾಜ್ಯಮಟ್ಟದ ಇನ್ವಿಟೇಷನ್ ಹಾಕಿ ಕಪ್‍ಗೆ ಹಾಕಿಕೂರ್ಗ್ ತಂಡ ಮುತ್ತಿಕಿದೆ. ಫೈನಲ್‍ನಲ್ಲಿ ಹಾಕಿ ಮೈಸೂರು ತಂಡವನ್ನು 1-0 ಗೋಲುಗಳ ಅಂತರದಲ್ಲಿ ಮಣಿಸಿ ಕಪ್ ಗೆದ್ದುಕೊಂಡಿತು.
ಹಾಕಿ ಕೂರ್ಗ್ ಪರ ಮಣಿ 39ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲು ಗೆಲವು ದಕ್ಕಿಸಿಕೊಳ್ಳಲು ಸಾಧ್ಯವಾಯಿತು.
ಬಹುಮಾನ ವಿತರಣೆ ಸಂದರ್ಭ ಅತಿಥಿಗಳಾಗಿ ಹೆಚ್. ಹೆಚ್. ಎಸ್.ಎನ್.ಡಬ್ಲ್ಯೂ. ಫೌಂಡೇಷನ್ ಅಧ್ಯಕ್ಷೆ ಪ್ರಮೋದಾದೇವಿ, ಸಂಸದ ಪ್ರತಾಪ್ ಸಿಂಹ, ಶಾಸಕ ನಾಗೇಗೌಡ, ಹಾಕಿ ಮೈಸೂರು ಅಧ್ಯಕ್ಷ ಕೆ.ಬಿ. ದಿಲೀಪ್, ಉಪಾಧ್ಯಕ್ಷ ಕೆ.ಎನ್. ಮುದ್ದಯ್ಯ, ಕಾರ್ಯದರ್ಶಿ ಸಿ.ಟಿ. ಸತೀಶ್ ಪಾಲ್ಗೊಂಡಿದ್ದರು.
-ಸುದ್ದಿಪುತ್ರ