ಮಡಿಕೇರಿ, ಡಿ. 23: ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಸೂರ್ತಲೆ ಸೋಮಣ್ಣ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪೊನ್ನಚನ ಮೋಹನ್ ಹಾಗೂ ಕಾರ್ಯದರ್ಶಿಯಾಗಿ ಕೋಳುಮುಡಿಯನ ಅನಂತಕುಮಾರ್, ಖಜಾಂಚಿಯಾಗಿ ಆನಂದ್ ಕರಂದ್ಲಾಜೆ ನಿಯುಕ್ತಿಗೊಂಡಿದ್ದಾರೆ. ಇಂದು ಇಲ್ಲಿನ ಗೌಡ ಸಮಾಜದ ಸಭಾಂಗಣದಲ್ಲಿ ಜರುಗಿದ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಒಕ್ಕೂಟದ ಸಹಕಾರ್ಯದರ್ಶಿಯಾಗಿ ಅಂಬೆಕಲ್ ನವೀನ್, ನಿರ್ದೇಶಕರುಗಳಾಗಿ ತೇನನ ರಾಜೇಶ್, ಹೊಸೂರು ಸತೀಶ್ ಕುಮಾರ್, ತೋಟಂಬೈಲು ಮನೋಹರ, ಮೂಡಗದ್ದೆ ರಾಮಕೃಷ್ಣ, ಪೈಕೇರ ಎಂ.ಮನೋಹರ, ಚಿಲ್ಲನ ಗಣಿಪ್ರಸಾದ್, ಅಮೆ ಸೀತಾರಾಮ್, ದಂಬೆಕೋಡಿ ಹರೀಶ್, ಪೇರಿಯನ ಉದಯಕುಮಾರ್, ಪಂಜಿಪಳ್ಳ ಯತೀಶ್ ಕುಮಾರ್ ನೇಮಕಗೊಂಡಿದ್ದಾರೆ. ನೂತನ ಆಡಳಿತ ಮಂಡಳಿಯ ಅಧಿಕಾರ 2021ರ ತನಕ ಇರಲಿದ್ದು, ಜನಾಂಗದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಅಧ್ಯಕ್ಷ ಸೂರ್ತಲೆ ಸೋಮಣ್ಣ ತಿಳಿಸಿದ್ದಾರೆ.