ಕುಶಾಲನಗರ, ಡಿ. 24: ಬಾಬಾ ಬುಡನ್ ಗಿರಿಯಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಹಿಂದುತ್ವವಾದಿಗಳ ಕೊಲೆಗಾರರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ವತಿಯಿಂದ ಪ್ರತಿಭಟನೆ ನಡೆಯಿತು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಹಿಂದು ಜನಜಾಗೃತಿ ಸಮನ್ವಯಕರಾದ ಶಿವರಾಮ್, ಪಟ್ಟಣ ಪಂಚಾಯಿತಿ ಸದಸ್ಯ ಅಮೃತರಾಜ್, ಪ್ರಮುಖರಾದ ರವಿಚಂದ್ರ ಸುಮನ್, ಆದರ್ಶ್, ಪ್ರವೀಣ್, ಶ್ರೀಲಕ್ಷ್ಮೀ, ಸೌಜನ್ಯ, ಶರ್ಮಿಳಾ ಇದ್ದರು.