*ಗೋಣಿಕೊಪ್ಪಲು, ಡಿ. 24: ಬೆಂಗಳೂರಿನ ಗಾರ್ಡ್ ಬುಕ್ ಕನ್ಸಲ್ಟೆಂಟ್ ಫೌಂಡೇಷನ್ ನಾಗರಹೊಳೆ ಅರಣ್ಯದಂಚಿನ ಬಾಳೆಲೆ-ಕಾರ್ಮಾಡು ಭಾಗದ ಕುಂಬಾರ ಕಟ್ಟೆ, ಗಣಗೂರು ವ್ಯಾಪ್ತಿಯ ಅರಣ್ಯ ರಕ್ಷಕರ ವಸತಿ ಗೃಹಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿ ಕೊಟ್ಟಿದೆ. ವನ್ಯಜೀವಿಗಳು ಅರಣ್ಯವನ್ನು ಬಿಟ್ಟು ಊರಿನತ್ತ ಬರುವದನ್ನು ತಡೆಗಟ್ಟಲು ಕಾಡಿನಂಚಿನಲ್ಲಿ ರಾತ್ರಿ ವೇಳೆ ಕಾವಲು ಕಾಯುವ ಅರಣ್ಯ ರಕ್ಷಕರಿಗೆ ಫೌಂಡೇಷನ್ ಸೋಲಾರ್ ದೀಪದ ವ್ಯವಸ್ಥೆ ಕಲ್ಪಿಸಿದೆ. ಸೋಲಾರ್ ಸಿಸ್ಟಮ್‍ನಿಂದ ಲೈಟ್, ಮಿಕ್ಷಿ, ಟಿ.ವಿ, ಕಂಪ್ಯೂಟರ್‍ಗಳನ್ನು ಬಳಸಬಹುದು ಎಂದು ಫೌಂಡೇಷನ್ ಸಂಚಾಲಕ ವಿಶ್ರುತ್ ತಿಳಿಸಿದ್ದಾರೆ.