ಚೆಟ್ಟಳ್ಳಿ, ಡಿ. 24: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಸ್ಥಾನ ವಾರ್ಷಿಕ ಮಹೋತ್ಸವ ಹಾಗೂ ಮಂಡಲ ಪೂಜೋತ್ಸವ ತಾ. 27 ರಂದು ನಡೆಯಲಿದೆ.
ಪ್ರಾತಃಕಾಲ 6 ರಿಂದ 8 ಗಂಟೆವರೆಗೆ ಗಣಪತಿ ಹವನ, ಬೆಳಿಗ್ಗೆ 10 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 12.30ಕ್ಕೆ ಪೂಜೆ, ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ.
ಸಂಜೆ 4 ಗಂಟೆಯಿಂದ ದೇವರ ಅಲಂಕೃತ ಮಂಟಪದೊಂದಿಗೆ ಚೆಟ್ಟಳ್ಳಿ ಶ್ರೀ ವಿನಾಯಕ ದೇವಸ್ಥಾನದಿಂದ ಶ್ರೀ ಅಯ್ಯಪ್ಪ ದೇವಸ್ಥಾನದವರೆಗೆ ಮೆರವಣಿಗೆ ತೆರಳಲಿದೆ. ಸಂಜೆ 8 ಗಂಟೆಗೆ ಭಜನೆ, ದೀಪಾರಾಧನೆ, ಮಹಾಪೂಜೆ, ದೈವಿಕ ಕಾರ್ಯಕ್ರಮ ಗಳು ಜರುಗಲಿದೆ. ನಂತರ ಅನ್ನಸಂತ ರ್ಪಣೆ ನಡೆಯಲಿದೆ ಎಂದು ದೇವಾಲಯ ಸಮಿತಿಯವರು ತಿಳಿಸಿದ್ದಾರೆ.