ಸುಂಟಿಕೊಪ್ಪ, ಡಿ. 24: ಇಲ್ಲಿನ ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 48ನೇ ವಾರ್ಷಿಕ ಮಂಡಲ ಪೂಜಾ ಮಹೋತ್ಸವ ಮತ್ತು ಅನ್ನಸಂತರ್ಪಣೆ ತಾ. 27 ರಂದು ನಡೆಯಲಿದೆ. ಅಂದು ಬೆಳಿಗ್ಗೆ 6.45ಕ್ಕೆ ಗಣಪತಿ ಹೋಮ, 7.30ಕ್ಕೆ ಚೆಂಡೆ ಮೇಳ, 9ಕ್ಕೆ ಅಯ್ಯಪ್ಪ ಸ್ವಾಮಿಗೆ ಪಂಚಾಮೃತಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಮಧ್ಯಾಹ್ನದ ಪೂಜೆ, 12.30ಕ್ಕೆ ಲಕ್ಷಾರ್ಚನೆ-ಪಲ್ಲಪೂಜೆ, 12.45ಕ್ಕೆ ಸಿಡಿಮದ್ದು ಏರ್ಪಡಿಸಲಾಗಿದೆ.

ಮಧ್ಯಾಹ್ನ 1 ಗಂಟೆಯಿಂದ 4 ಗಂಟೆಯವರೆಗೆ ಅನ್ನಸಂತರ್ಪಣೆ ಹಾಗೂ ಬಿಲ್ವಪತ್ರೆ ಅರ್ಚನೆ, ತುಳಸಿ ಅರ್ಚನೆ, ಪಂಚಾಮೃತ ಅಭಿಷೇಕ, ದೂರ್ವಾಚನೆ ನಡೆಯಲಿದೆ. ಸಂಜೆ 6 ಗಂಟೆಗೆ ವಿದ್ಯುತ್ ದೀಪ ಅಲಂಕೃತ ಭವ್ಯ ಮಂಟಪದಲ್ಲಿ ನೀಲಾಂಜನ (ಮಕ್ಕಳಿಂದ ದೀಪ ಹಿಡಿಯುವಿಕೆ) ಹಾಗೂ ಚಂಡೆ ಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಶೋಭಯಾತ್ರೆಯು ಪಟ್ಟಣದ ಮುಖ್ಯ ಬೀದಿಯಲ್ಲಿ ನಡೆಯಲಿದ್ದು, ನಂತರ ಮಹಾಮಂಗಳಾರತಿ ನಡೆಯಲಿದೆ ಎಂದು ಅಧ್ಯಕ್ಷ ಎಂ.ಟಿ. ಧನು ಕಾವೇರಪ್ಪ ತಿಳಿಸಿದ್ದಾರೆ.