ಚೆಟ್ಟಳ್ಳಿ, ಡಿ. 24: ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾನಿಗೊಳಗಾದ ಸಂತ್ರಸ್ತರಾದ 4 ಕುಟುಂಬಗಳಿಗೆ ತಲಾ 10,500ರಂತೆ ಇತ್ತೀಚೆಗೆ ಕೆದಮುಳ್ಳೂರು ಪ್ಲಾಂಟರ್ಸ್ ಕ್ಲಬ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭ ಕ್ಲಬ್ ಅಧ್ಯಕ್ಷ ಮಾಳೇಟಿರ ಜೀವನ್ ಮುದ್ದಯ್ಯ, ಪದಾಧಿಕಾರಿಗಳಾದ ಕುಂಬೆರ ರಂಜನ್ ಪೂವಯ್ಯ, ಕರಿನೆರವಂಡ ಧನು ಬೋಪಯ್ಯ, ಮಾಳೇಟಿರ ಪ್ರದೀಪ್ ಗೌತಮ್, ಚೆನಿಯಪಂಡ ಅಚ್ಚಯ್ಯ, ಮಾಳೇಟಿರ ಬೋಪಣ್ಣ, ಮಾಳೇಟಿರ ದರ್ಶನ್, ಚೇತನ್ ಗಣಪತಿ ಹಾಗೂ ಅಜಿತ್ ಪೂವಣ್ಣ ಉಪಸ್ಥಿತರಿದ್ದರು.