ಶ್ರೀಮಂಗಲ, ಡಿ. 23: ಪೊನ್ನಂಪೇಟೆ ಕೊಡವ ಸಮಾಜದ ಆಶ್ರಯದಲ್ಲಿ ಕೊಡವ ಜಾನಪದ ಕಲೆ ಮತ್ತು ಸಾಂಸ್ಕøತಿಕ ಆಚರಣೆಗಳನ್ನು ಉಳಿಸಿಕೊಂಡು ಬೆಳೆಸುವ ನಿಟ್ಟಿನಲ್ಲಿ ಪ್ರತಿ ವರ್ಷ ಆಚರಣೆ ಮಾಡುವ ಪುತ್ತರಿ ಊರೋರ್ಮೆ ಹಾಗೂ ಕೊಡವ ಸಾಂಸ್ಕøತಿಕ ದಿನಾಚರಣೆ ಹಬ್ಬದ ಸಂಭ್ರಮದೊಂದಿಗೆ ನಡೆಯಿತು.

ಕಾರ್ಯಕ್ರಮಕ್ಕೆ ಕೊಡವ ಸಮಾಜದ ಮುಂಭಾಗದಲ್ಲಿರುವ ಕಾವೇರಿ ಪ್ರತಿಮೆ ಎದುರು ಕಾರ್ಯಕ್ರಮ ಯಶಸ್ವಿಯಾಗುವಂತೆ ಪ್ರಾರ್ಥಿಸಿ ಅಕ್ಷತೆಯನ್ನು ಕಾವೇರಿ ಪ್ರತಿಮೆಗೆ ಅರ್ಪಿಸಿ ಹಿರಿಯರಾದ ಕುಂಞÂ್ಞಯಂಡ ಉತ್ತಪ್ಪ ಚಾಲನೆ ನೀಡಿದರು.

ಕೊಡವ ಸಮಾಜ ಆವರಣದಲ್ಲಿ ಪುತ್ತರಿ ಕೋಲಾಟದ ಕೋಲಿನ ಶಬ್ದ, ಕತ್ತಿಯಾಟದ ಝಳಕು, ಉಮ್ಮತ್ತಾಟ್‍ನ ಗೆಜ್ಜೆಯ ತಾಳದ ನಿನಾದ, ಪರೆಯಕಳಿಯ ಶೌರ್ಯದ ಕಲರವ ಎಲ್ಲೆಂದರಲ್ಲಿ ಕೇಳುತ್ತಿತ್ತು. ಎಲ್ಲರು ಒಂದಾಗಿ ಸಾಮೂಹಿಕ ವಾಲಗ ತ್ತಾಟದ ಭ್ರಾತೃತ್ವದ ಸಂಕೇತವಾಗಿ ಮೂಡಿ ಬಂತು. ಕಿರಿಯರು ಹಿರಿ ಯರು ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರು.

ಮಂದ್ ಹಿಡಿಯುವ ಕಾರ್ಯಕ್ರವiದೊಂದಿಗೆ ಆರಂಭವಾದ ಸಾಂಸ್ಕøತಿಕ ಪೈಪೋಟಿಯಲ್ಲಿ ಉಮ್ಮತ್ತಾಟ್, ಕೋಲಾಟ್, ಕತ್ತಿಯಾಟ್, ಬೊಳ್‍ಕಾಟ್, ಪರೆಯಕಳಿ, ಕಪ್ಪೆಯಾಟ್ ಹಾಗೂ ವಾಲಗತ್ತಾಟ್ ಮಹಿಳೆಯರಿಗೆ, ಪುರುಷರಿಗೆ, ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಪ್ರತ್ಯೇಕವಾಗಿ ನಡೆಸಲಾಯತು.

ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್‍ಬೋಪಯ್ಯ, ಉಪಾಧ್ಯಕ್ಷ ಚೆಪ್ಪುಡಿರ ಬೋಪಣ್ಣ, ಕಾರ್ಯದರ್ಶಿ ಪೊನ್ನಿಮಾಡ ಸುರೇಶ್, ಖಂಜಾಚಿ ಮೂಕಳೆರ ಲಕ್ಷ್ಮಣ, ಸಹ ಕಾರ್ಯದರ್ಶಿ ಅಪ್ಪಂಡೇರಂಡ ಶಾರದ, ನಿದೆÉೀಶಕರುಗಳಾದ ಮಲ್ಲಮಾಡ ಪ್ರಭು ಪೂಣಚ್ಚ, ಮಂಡೆಂಚಡ ದಿನೇಶ್‍ಚಿಟ್ಟಿಯಪ್ಪ, ಚೆಪ್ಪುಡಿರ ರಾಕೇಶ್‍ದೇವಯ್ಯ, ಚೆಪ್ಪುಡಿರ ರೂಪಉತ್ತಪ್ಪ, ಚೊಟ್ಟೆಕಾಳಪಂಡ ಅಶಾಪ್ರಕಾಶ್, ಅಡ್ಡಂಡ ಸುನಿಲ್, ಮೂಕಳಮಾಡ ಅರುಸುನಂಜಪ್ಪ, ಖಾಯಂ ಆಹ್ವಾನಿತರಾದ ಚೆಪ್ಪುಡಿರ ಕಿಟ್ಟುಅಯ್ಯಪ್ಪ, ಕಾರ್ಯಕ್ರಮ ಸಂಯೋಜಕರಾದ ಕಾಳಿಮಾಡ ಮೋಟಯ್ಯ ಉಪಸ್ಥಿತರಿದ್ದರು.

ಫಲಿತಾಂಶ:- ಉಮ್ಮತ್ತಾಟ್: ಹಿರಿಯರ ವಿಭಾಗ: ಪ್ರಥಮ ಕಾವೇರಿ ಮಹಿಳಾ ಸಮಾಜ ಹೈಸೊಡ್ಲೂರು, ದ್ವೀತಿಯ ಕಾವೇರಿ ಕಾಲೇಜು ಗೋಣಿಕೊಪ್ಪ.

ಉಮ್ಮತ್ತಾಟ್: ಕಿರಿಯರ ವಿಭಾಗ: ಪ್ರಥಮ ಅಪ್ಪಚ್ಚ ಕವಿ ವಿಧ್ಯಾಲಯ ಪೊನ್ನಂಪೇಟೆ ದ್ವೀತಿಯ ರೂಟ್ಸ್ ಸ್ಕೂಲ್ ಟಿ. ಶೆಟ್ಟಿಗೇರಿ ತೃತಿಯ ಲಿಟ್ಟಲ್ ಫ್ಲವರ್ ಸ್ಕೂಲ್ ಹುದಿಕೇರಿ.

ಪುತ್ತರಿ ಕೋಲಾಟ್ ಹಿರಿಯರಿಗೆ: ಪ್ರಥಮ ಮೂಂದ್ ನಾಡ್ ಕೊಡವ ಸಮಾಜ, ಟಿ.ಶೆಟ್ಟಿಗೇರಿ. ದ್ವೀತಿಯ ಪುತ್ತ್‍ಭಗವತಿ ತಂಡ, ಬಿರುನಾಣಿ. ತೃತೀಯ ಬಲ್ಯಮುಂಡೂರ್ ತಂಡ.

ಕೋಲಾಟ್ ಕಿರಿಯರು: ಪ್ರಥಮ ರೂಟ್ಸ್ ಶಾಲೆ, ಟಿ. ಶೆಟ್ಟಿಗೇರಿ. ದ್ವಿತೀಯ ಅಪ್ಪಚ್ಚಕವಿ ವಿದ್ಯಾಲಯ, ಪೊನ್ನಂಪೇಟೆ. ತೃತೀಯ ಲಿಟಲ್ ಪ್ಲವರ್ ಶಾಲೆ, ಹುದಿಕೇರಿ.

ಬೊಳ್‍ಕಾಟ್ ಹಿರಿಯರ ವಿಭಾಗ: ಪ್ರಥಮ ಪುತ್ತ್ ಭಗವತಿ, ಬಿರುನಾಣಿ. ದ್ವಿತೀಯ ಬಲ್ಯಮುಂಡೂರ್. ತೃತೀಯ ಮೂಂದ್ ನಾಡ್ ಕೊಡವ ಸಮಾಜ ಟಿ.ಶೆಟ್ಟಿಗೇರಿ.

ಕಿರಿಯರ ವಿಭಾಗ: ರೂಟ್ಸ್ ಶಾಲೆ, ಟಿ.ಶೆಟ್ಟಿಗೇರಿ. ದ್ವೀತಿಯ ಅಪ್ಪಚ್ಚ ಕವಿ ವಿದ್ಯಾಲಯ ಪೊನ್ನಂಪೇಟೆ. ತೃತಿಯ ಲಿಟ್ಟಲ್ ಪ್ಲವರ್ ಶಾಲೆ, ಹುದಿಕೇರಿ

ಪರೆಯಕಳಿ ಹಿರಿಯರ ವಿಭಾಗ: ಪುತ್ತ್ ಭಗವವತಿ ಬಿರುನಾಣಿ, ದ್ವೀತಿಯ ಬೆಕ್ಕೆಸೊಡ್ಲೂರು, ತೃತೀಯ ಆರ್ಜಿ ವೀರಾಜಪೇಟೆ.

ಪರೆಯಕಳಿ ಕಿರಿಯರ ವಿಭಾಗ: ಅಪ್ಪಚ್ಚಕವಿ ವಿದ್ಯಾಲಯ ಪೊನ್ನಂಪೇಟೆ, ದ್ವೀತಿಯ ನೆಲ್ಲಮಾಡ ವೇದಾಂತ್‍ಬೆಳ್ಯಪ್ಪ ತಂಡ, ತೃತೀಯ ಲಿಟ್ಟಲ್ ಪ್ಲವರ್ ಶಾಲೆ, ಹುದಿಕೇರಿ.

ಕತ್ತಿಯಾಟ್ ಕಿರಿಯರ ವಿಭಾಗ : ಪ್ರಥಮ ರೂಟ್ಸ್ ಶಾಲೆ, ಟಿ.ಶೆಟ್ಟಿಗೇರಿ. ದ್ವಿತೀಯ ಅಪ್ಪಚ್ಚ ಕವಿ ವಿದ್ಯಾಲಯ, ಪೊನ್ನಂಪೇಟೆ.

ಕಪ್ಪೆಯಾಟ್ ಹಿರಿಯರ ವಿಭಾಗ: ಪ್ರಥಮ ಅಣ್ಣೀರ ನಾಚಪ್ಪ ಬಾಡಗರಕೇರಿ, ದ್ವಿತೀಯ ಮತ್ರಂಡ ಪೂವಯ್ಯ ಪೊನ್ನಂಪೇಟೆ, ತೃತೀಯ ಸುಳ್ಳಿಮಾಡ ಪ್ರಜ್ವಲ್ ಬೆಕ್ಕೆಸೂಡ್ಲೂರ್

ಕಪ್ಪೆಯಾಟ್ ಬಾಲಕರಿಗೆ: ಪ್ರಥಮ ನಿಕಿಲ್‍ಚೆಂಗಪ್ಪ ಸುಜ್ಯೋತಿ ಶಾಲೆ ಬಿರುನಾಣಿ, ದ್ವಿತೀಯ ನಿಶಾಂತ್‍ಗಣಪತಿ ಅಪ್ಪಚ್ಚಕವಿ ವಿದ್ಯಾಲಯ ಪೊನ್ನಂಪೇಟೆ, ತೃತೀಯ ಪ್ರಜ್ವಲ್‍ಪೂವಯ್ಯ ರೂಟ್ಸ್ ಶಾಲೆ.

ವಾಲಗತ್ತಾಟ್ ಕಿರಿಯರ ವಿಭಾಗ: ಪ್ರಥಮ ಬೊಟ್ಟಂಗಡ ಗೌತಮ್, ದ್ವಿತೀಯ ಬೊಟ್ಟಂಗಡ ಗಣಪತಿ, ತೃತೀಯ ಮೀದೇರಿರ ದಿಲನ್.

ಮಹಿಳೆಯರ ವಿಭಾಗ: ಪ್ರಥಮ ಕೆಂಜಂಗಡ ಜೀವಿತ, ದ್ವಿತೀಯ ಅಣ್ಣೀರ ರೂಪಪೆಮ್ಮಯ್ಯ, ತೃತೀಯ ನೆಲ್ಲಮಾಡ ಸೌಮ್ಯ.

ಬಾಲಕಿಯರ ವಿಭಾಗ: ಮೊನಿಕ ಹೆಚ್.ವಿ, ದ್ವಿತೀಯ ಕೊಟ್ಟಂಗಡ ವರ್ಷಿತ, ತೃತೀಯ ಮೂಕಳೇರ ತುಳಸಿ.

ಪುರುಷರ ವಿಭಾಗ: ಪ್ರಥಮ ಕಬ್ಬಚ್ಚಿರ ಮಾಚಯ್ಯ, ಮಚ್ಚಮಾಡ ವಿನು ದ್ವಿತೀಯ ತೃತೀಯ ಕಬ್ಬಚ್ಚಿರ ವಸಂತ ಕುಟ್ಟಪ್ಪ.

ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ಹಿರಿಯರ ಮತ್ತು ಕಿರಿಯರ ವಿಭಾಗದಿಂದ ಕೋಲಾಟ್, ಕತ್ತಿಯಾಟ್, ಉಮ್ಮತ್ತಾಟ್ ಪ್ರದರ್ಶನ ನಡೆಯಿತು.

ತೀರ್ಪುಗಾರರಾಗಿ ಸೋಮೆ ಯಂಡ ಕಾವೇರಪ್ಪ, ಮೀದೇರಿರ ಮಣಿ ಕಾರ್ಯಪ್ಪ, ಬಲ್ಯಮೀದೇರಿರ ಕಸ್ತೂರಿ, ಕಾಳಿಮಾಡ ಲತಾಮೋಟಯ್ಯ ನಿರ್ವಹಿಸಿದರು.