ಗೋಣಿಕೊಪ್ಪ ವರದಿ, ಡಿ. 22: ಮೈಸೂರು ಮಹರಾಜಾಸ್ ಕಾಲೇಜು ಮೈದಾನದಲ್ಲಿ ಹಾಕಿ ಮೈಸೂರು ವತಿಯಿಂದ ನಡೆಯುತ್ತಿರುವ ಅಂತರ್ ಜಿಲ್ಲಾ ಮಟ್ಟದ ಇನ್ವಿಟೇಷನ್ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡವು ಫೈನಲ್‍ಗೆ ಲಗ್ಗೆ ಇಟ್ಟಿದೆ. ಸೆಮಿಫೈನಲ್‍ನಲ್ಲಿ ಹಾಕಿ ಹಾಸನ ತಂಡವನ್ನು ಮಣಿಸಿ ಈ ಸಾಧನೆ ಮಾಡಿತು. ಫೈನಲ್ ಪಂದ್ಯ ಭಾನುವಾರ ಮ. 3 ಕ್ಕೆ ಹಾಕಿ ಮೈಸೂರು ವಿರುದ್ಧ ನಡೆಯಲಿದೆ.

ಹಾಕಿ ಹಾಸನ ತಂಡವನ್ನು 4-1 ಗೋಲುಗಳ ಮೂಲಕ ಸೋಲಿಸಿ ಫೈನಲ್‍ಗೇರಿತು. ಕೂರ್ಗ್ ಪರ ಶಮಂತ್ 2 ಗೋಲು ಹೊಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಮಣಿ ಹಾಗೂ ಪೊನ್ನಣ್ಣ ತಲಾ ಒಂದೊಂದು ಗೋಲು ಹೊಡೆದು ಗೆಲುವಿನ ಅಂತರ ಹೆಚ್ಚಿಸಿದರು. -ಸುದ್ದಿಪುತ್ರ