ಚೆಟ್ಟಳ್ಳಿ, ಡಿ. 22: ಬೆಂಗಳೂರಿನ ಫೆನ್ರ್ಸ್ ಮತ್ತು ಕಾವೇರಿ ಕೊಡವ ಸಂಘ ಕೆ. ಆರ್. ಪುರಂ ಬೆಂಗಳೂರು ಅವರು ಇಂದು ಮಡಿಕೇರಿಯ ಕೊಡವ ಸೇವಾ ಕೇಂದ್ರ ಕೊಡವ ಸಮಾಜ ಸಂಕೀರ್ಣ ಅವರ ಸಹಯೋಗದಲ್ಲಿ ಪ್ರಕೃತಿ ವಿಕೋಪದಲ್ಲಿ ತೀರಾ ನಷ್ಟ ಅನುಭವಿಸಿದ ಫಲಾನುಭವಿಗಳನ್ನು ಗುರುತಿಸಿ ಪರಿಹಾರ ವಿತರಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸೇವಾಕೇಂದ್ರದ ಸಂಚಾಲಕರಾದ ಬಿದ್ದಾಟಂಡ ತಮ್ಮಯ್ಯನವರು ದಾನಿಗಳು ಕಷ್ಟಪಟ್ಟು ತಮ್ಮ ಬೆವರಿನ ಹಣವನ್ನು ತಂದು ನಿಮ್ಮಂತವರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಆದುದರಿಂದ ತಾವುಗಳು ಆ ಹಣವನ್ನು ಅನವಶ್ಯಕ ಪೋಲುಮಾಡದೆ ಸುದುಪಯೋಗಿಸಿ ಕೊಳ್ಳುವಂತೆ ಕಿವಿಮಾತು ಹೇಳಿದರು. ನಂತರ ಸಂಘದವರು ಮತ್ತು ಕಮಿಟಿಯವರು ಜೊತೆಗೂಡಿ ಅವರು ಸಂಗ್ರಹಿಸಿ ತಂದ ಎರಡು ಲಕ್ಷದಷ್ಟ್ಟು ಹಣವನ್ನು ಸಂತ್ರಸ್ತರಾದ ಮೇದುರ ಮಾದಪ್ಪ, ತಾಚಮಂಡ ಪೂವಮ್ಮ, ಕುಶ ಬಿ.ಎನ್. ಮುಕ್ಕಾಟಿರ ದೇವಕಿ, ಮೇದುರ ಶಾಂತಿ, ಶಾಂತೆಯಂಡ ಭೀಮಯ್ಯ, ಕೇಶವ ಬಿ.ಕೆ. ಪೊನ್ನಪ್ಪ ಸಿ.ಕೆ. ತಂಬುಕುತ್ತಿರ ಪೂವಣ್ಣ, ನಾಪಂಡ ತಿಮ್ಮಯ್ಯ ಅವರಿಗೆ ಕ್ರಮವಾಗಿ ವಿತರಿಸಿದರು .
ಸಮಾರಂಭದಲ್ಲಿ ಫರ್ನ್ ರಾಜ್ಯೋತ್ಸವ ಕಮಿಟಿಯ ಸದಸ್ಯರಾದ ಚೊಟ್ಟೆರ ಚೆಂಗಪ್ಪ, ರಾಜೇಶ್ ಬಡಿಗೇರ, ವಿನಯ್ ಸಿಂದೆ, ಶಿವಾನಂದ್ ಹಿರೇಮಠ್, ಕೀರ್ತಿ ಕಂಡೂರ್, ಮೊಳ್ಳೆರ ಅನಿತಾ, ಅಜಿತ್ ಸಿಂಗ್, ಕಾವೇರಿ ಸಂಘ ಬೆಂಗಳೂರಿನ ಎಂ. ನಾಚಪ್ಪ, ಎಂ. ಸೋಮಯ್ಯ, ಅಲ್ಲಾಪಿರ ಪೊನ್ನಪ್ಪ, ಮೂಳೆರ ಪೊನ್ನು ಉತ್ತಯ್ಯ ಮತ್ತು ಕೊಡವ ಸೇವಾ ಕೇಂದ್ರದ ಸಂಚಾಲಕರಾದ ಅಜ್ಜಿನಂಡ ತಮ್ಮು ಪೂವಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ, ತೇಲಪಂಡ ಪ್ರಮೋದ್, ಮಂದಪಂಡ ಸತೀಶ್, ಮದನ್ ಮುಂತಾದವರು ಹಾಜರಿದ್ದರು.